

ರಿಯೊ ಡಿ ಜೆನೈರೊ: ವಿಶ್ವಕಪ್ ಪಂದ್ಯಾವಳಿಯ ಸಂದರ್ಭದಲ್ಲಿ ಅಭಿಮಾನಿಗಳು ತಮ್ಮ ಮನೆಗೆ ತೆರಳುವ ಮುನ್ನ ಬಿಯರ್ ಖರೀದಿಸಲು ಸಾಲುಗಟ್ಟಿನಿಲ್ಲುವ ದೃಶ್ಯ ಸಾಮಾನ್ಯ. ಹಾಗಾಗಿ ಬ್ರೆಜಿಲ್ ಮೈದಾನದಲ್ಲಿ ಬಿಯರ್ ಮಾರಾಟದ ಬಗೆಗಿನ ಕಾನೂನನ್ನು ತಿದ್ದುಪಡಿ ಮಾಡುವಂತೆ ಫಿಫಾ ತಿಳಿಸಿದೆ.
ಒಂದು ತಿಂಗಳ ಕಾಲ ನಡೆಯುವ ಈ ಪಂದ್ಯಾವಳಿಯ ಸಂದರ್ಭದಲ್ಲಿ ಅಭಿಮಾನಿಗಳ ಕುಡಿತದ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಫಿಫಾ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ. ಈ ವಾದಗಳ ನಡುವೆಯೂ ಟೂರ್ನಿಯ ಸೆಮಿಫೈನಲ್ ಪಂದ್ಯಗಳಲ್ಲಿ ಮೈದಾನದಲ್ಲಿ ಬಿಯರ್ ಸೌಲಭ್ಯ ಮುಂದುವರಿಯುವ ನಿರೀಕ್ಷೆಗಳಿವೆ.