
ಸಾವೊ ಪೊಲೊ: ಫುಟ್ಬಾಲ್‌ನಲ್ಲಿ ಪಂದ್ಯವೊಂದು ಪೆನಾಲ್ಟಿ ಶೂಟೌಟ್‌ಗೆ ಜಾರಿದರೆ, ಆಗ ಅದೃಷ್ಟವಿದ್ದ ತಂಡ ಗೆಲ್ಲುತ್ತದೆ ಎಂದೇ ಭಾವಿಸಲಾಗುತ್ತದೆ. ಕಾರಣ ಪೆನಾಲ್ಟಿ ಶೌಟೌಟ್ ಒಂದು ರೀತಿಯಲ್ಲಿ ಲಾಟರಿ ಇದ್ದಂತೆಯೇ ಸರಿ.
ಆದರೆ, ವಿಶ್ವಕಪ್‌ನಲ್ಲಿ ಹಾಲೆಂಡ್ ಮತ್ತು ಅರ್ಜೆಂಟೀನಾ ನಡುವೆ ನಡೆದ ಎರಡನೇ ಸೆಮಿಫೈನಲ್ ಪಂದ್ಯ ಇದಕ್ಕೆ ಭಿನ್ನವಾಗಿತ್ತು. ಹಾಲೆಂಡ್‌ನ ಎರಡು ಗೋಲುಗಳನ್ನು ತಡೆಯುವಲ್ಲಿ ಯಶಸ್ವಿಯಾದ ಅರ್ಜೆಂಟೀನಾದ ಗೋಲ್ ಕೀಪರ್ ಸೆರ್ಜಿಯೋ ರೋಮೆರೊ ಅವರು ಪೆನಾಲ್ಟಿ ಶೂಟೌಟ್‌ಗಿಂತ ಮೊದಲು ಹೋಮ್‌ವರ್ಕ್ ಮಾಡಿಕೊಂಡು ಬಂದಿದ್ದರು. ಯಾರ ಗೋಲನ್ನು ಹೇಗೆ ತಡೆಯಬೇಕು ಎಂಬ ಬಗ್ಗೆ ಅವರು ಮೊದಲೇ ನೋಟ್‌ನಲ್ಲಿ ಬರೆದುಕೊಂಡು ಬಂದಿದ್ದರು.
ತಮ್ಮ ವಿಶೇಷ ಕಾರ್ಯತಂತ್ರವನ್ನು ಪೆನಾಲ್ಟಿ ಶೂಟೌಟ್ ಸಂದರ್ಭದಲ್ಲಿ ನನಪು ಮಾಡಿಕೊಳ್ಳಲು ನೋಟನ್ನು ತೆಗೆದು ಓದಿಕೊಂಡಿದ್ದು ಕಂಡುಬಂದಿತು. ಅಲ್ಲದೆ, ತಮ್ಮ ಕಾರ್ಯತಂತ್ರದಲ್ಲಿ ಸೆರ್ಜಿಯೋ ಯಶಸ್ವಿಯಾಗಿದ್ದು, ಈಗ ಎದುರಾಳಿ ಹಾಲೆಂಡ್ ತಂಡವನ್ನು ಅಚ್ಚರಿಗೊಳಪಡಿಸಿದೆ.
Advertisement