ರಿಯೋ ಡಿ ಜನೈರೋ: ನೈಜೀರಿಯಾ ಫುಟ್ಬಾಲ್ ಫೆಡರಷೇನ್‌ನ್ನು (ಎನ್‌ಎಫ್‌ಎಫ್) ಫಿಫಾ ಅಮಾನತು ಮಾಡಿದೆ. ಎನ್‌ಎಫ್‌ಎಫ್‌ನಲ್ಲಿ ನೈಜೀರಿಯಾ ಸರ್ಕಾರ ಹಸ್ತಕ್ಷೇಪ ಮಾಡಿದ ಹಿನ್ನೆಲೆಯಲ್ಲಿ ಫಿಫಾ ಈ ತೀರ್ಮಾನ ತೆಗೆದುಕೊಂಡಿದೆ. ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನೈಜೀರಿಯಾ ಫುಟ್ಬಾಲ್ ತಂಡ ಸೋಲನುಭವಿಸಿದ ಹಿನ್ನೆಲೆಯಲ್ಲಿ ಎನ್‌ಎಫ್‌ಎಫ್ ಅನ್ನು ತೆಗೆದು ಹಾಕಿದ್ದ ಅಲ್ಲಿನ ಸರ್ಕಾರ, ಫುಟ್ಬಾಲ್ ಫೆಡರೇಷನ್‌ನ್ನು ನಡೆಸಲು ಏಕವ್ಯಕ್ತಿ ಆಡಳಿತವನ್ನು ಜಾರಿಗೆ ತಂದಿತ್ತು. 'ಫಿಫಾ ತುರ್ತು ಸಮಿತಿ ತಕ್ಷಣದಿಂದಲೇ ನೈಜೀರಿಯಾ ಫುಟ್ಬಾಲ್ ಫೆಡರೇಷನ್ ಅಮಾನತುಗೊಳಿಸಲು ತೀರ್ಮಾನಿಸಿದೆ' ಎಂದು ಫಿಫಾ ತಿಳಿಸಿದೆ.
Advertisement