
ರಿಯೊ ಡಿ ಜೆನೈರೊ: ಆತಿಥೇಯ ಬ್ರೆಜಿಲ್ ತಂಡವನ್ನು ಬೃಹತ್ ಅಂತರದಲ್ಲಿ ಮಣಿಸಿರುವ ಜರ್ಮನಿ ತಂಡ ಅತಿಯಾದ ಅಹಂನಿಂದ ಬೀಗುತ್ತಿದೆ ಎಂದು ಅರ್ಜೆಂಟೀನಾ ಫುಟ್ಬಾಲ್‌ನ ದಂತಕತೆ ಡಿಗೊ ಮರಡೋನಾ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಜರ್ಮನಿಯನ್ನು ಎದುರಿಸಲಿದೆ. ಟೂರ್ನಿಯ ಉಪಾಂತ್ಯದ ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್ ವಿರುದ್ಧ 7-1 ಗೋಲುಗಳ ಬೃಹತ್ ಅಂತರದಲ್ಲಿ ಗೆಲವು ದಾಖಲಿಸಿರುವ ಜರ್ಮನಿ ಅತಿಯಾದ ಅಹಂನಲ್ಲಿದೆ. ಇದು ಅರ್ಜೆಂಟೀನಾಗೆ ನೆರವಾಗಲಿದೆ ಎಂದು ಅವರು ತಿಳಿಸಿದರು.
ಮೆಸ್ಸಿ ನೇತೃತ್ವದ ಅರ್ಜೆಂಟೀನಾ, ಜರ್ಮನಿಯ ಈ ಮನೋಭಾವವನ್ನು ಬಳಸಿಕೊಂಡು ಉತ್ತಮ ಫಲಿತಾಂಶ ಪಡೆಯಲಿದೆ. ಅಲ್ಲದೆ ಜರ್ಮನಿ ತಂಡವನ್ನು ಮಣಿಸುವುದು ಕಷ್ಟದ ವಿಷಯವಲ್ಲ ಎಂದು ಮರಡೋನಾ ಅಭಿಪ್ರಾಯಪಟ್ಟಿದ್ದಾರೆ. ಅರ್ಜೆಂಟೀನಾ ತಂಡ ನೆದರ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದು, ಫೈನಲ್‌ನಲ್ಲೂ ಅದೇ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement