
ಆತಿಥೇಯ ಬ್ರೆಜಿಲ್ ಮತ್ತು ಹಾಲೆಂಡ್ ತಂಡಗಳ ನಡುವಿನ ಮೂರನೇ ಸ್ಥಾನದ ಪಂದ್ಯದ ಆತಿಥ್ಯವನ್ನು ಎಸ್ಟಾಡಿಯೊ ನ್ಯಾಷನಲ್ ಡಿ ಬ್ರೆಸಿಲಿಯಾ ಕ್ರೀಡಾಂಗಣದ ವಹಿಸಿದೆ. ಬ್ರೆಜಿಲ್‌ನ ರಾಜಧಾನಿಯಾಗಿರುವ ಬ್ರೆಸಿಲ್ಲಾದಲ್ಲಿನ ಈ ಕ್ರೀಡಾಂಗಣದ ವಿನ್ಯಾಸ ಮನಮೋಹಕವಾಗಿದ್ದು, ಇಲ್ಲಿಯೇ ಪಂದ್ಯಾವಳಿಯಲ್ಲಿ ಹೆಚ್ಚು ಪಂದ್ಯಗಳ ಆತಿಥ್ಯ ವಹಿಸಿದ್ದ ಖ್ಯಾತಿಯನ್ನು ್ನ ಇದು ಹೊಂದಿದೆ. ಇದರ ಸಾಮರ್ಥ್ಯ 69,432. 2013ರ ಕಾನ್ಫಡರೇಷನ್ ಕಪ್ ಪಂದ್ಯಾವಳಿಯನ್ನು ಇಲ್ಲಿ ಆಯೋಜಿಸಲಾಗಿದ್ದು, ಕ್ವಾರ್ಟರ್‌ಫೈನಲ್ ಹಾಗೂ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯ ಸೇರಿದಂತೆ ಒಟ್ಟು ಏಳು ಪಂದ್ಯವನ್ನು ಆಯೋಜಿಸಲಿದೆ. ಇದರ ನಿರ್ಮಾಣ ಕಾರ್ಬನ್ ಮುಕ್ತವಾಗಿದ್ದು, ಪರಿಸರ ಸ್ನೇಹಿ ಕ್ರೀಡಾಂಗಣವಾಗಿದೆ.
Advertisement