
ಟೆರೆಸೊಪೊಲಿಸ್ (ಬ್ರೆಜಿಲ್): ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ತಂಡವನ್ನು ಹೀನಾಯವಾಗಿ ಸೋಲಿಸಿದ ಜರ್ಮನಿಯನ್ನು ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಸೋಲಿಸಬೇಕು ಎಂದು ಬ್ರೆಜಿಲ್ ತಂಡದ ಗಾಯಾಳು ನೇಮಾರ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯೊಂದರಲ್ಲಿ ಭಾವನಾತ್ಮಕವಾಗಿ ಮಾತನಾಡುತ್ತಾ ಕಣ್ಣೀರಿಟ್ಟ ನೇಮಾರ್, ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಲಯೋನೆಲ್ ಮೆಸ್ಸಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತಮ್ಮ ಬೆನ್ನಿನ ಮೂಳೆ ಮುರಿದ ಕಾರಣ ಸೆಮಿಫೈನಲ್‌ಗೆ ಅಲಭ್ಯರಾಗಿದ್ದಕ್ಕೆ ನೇಮಾರ್ ಬೇಸರ ವ್ಯಕ್ತಪಡಿಸಿದರು. ಈಗ ತಮ್ಮ ಬಾರ್ಸಿಲೋನಾ ಸಹ ಆಟಗಾರ ಮೆಸ್ಸಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಅರ್ಜೆಂಟೀನಾ ಗೆಲ್ಲಬೇಕು ಎಂದು ಹೇಳಿದರು. 'ಕ್ರೀಡೆಯಲ್ಲಿ ಮೆಸ್ಸಿ ಇತಿಹಾಸ ಮಹತ್ವವಾದದ್ದು. ಅವರು ಈಗಾಗಲೇ ಹಲವಾರು ಟ್ರೋಫಿಗಳನ್ನು ಗೆದ್ದಿದ್ದಾರೆ. ಈಗ ನಾನು ಅವರಿಗೆ ಬೆಂಬಲ ವ್ಯಕ್ತಪಡಿಸುತ್ತೇನೆ' ಎಂದು ನೇಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Advertisement