
ರಿಯೋ ಡಿ ಜನೈರೋ: ಸೂಪರ್ ರೂಪದರ್ಶಿ ಗಿಸೆಲೆ ಬಂದ್‌ಚೆನ್ ಮತ್ತು ಸ್ಪೇನ್‌ನ ಅಂತಾರಾಷ್ಟ್ರೀಯ ಮಾಜಿ ಫುಟ್ಬಾಲ್ ತಾರೆ ಕಾರ್ಲ್ಸ್ ಪಿಯೋಲ್ ಅವರು ವಿಶ್ವಕಪ್ ಟ್ರೋಫಿಯನ್ನು ಮಾರಾಕನಾ ಸ್ಟೇಡಿಯಂಗೆ ತರಲಿದ್ದಾರೆ. ನಂತರ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಟ್ರೋಫಿಯನ್ನು ಹಸ್ತಾಂತರಿಸಲಾಗುತ್ತದೆ. ಬಂದ್‌ಚೆನ್ ಅವರು ಆತಿಥೇಯ ಬ್ರೆಜಿಲ್ ದೇಶವನ್ನು ಪ್ರತಿನಿಧಿಸಿದರೆ, ಪಿಯೋಲ್ ದಕ್ಷಿಣ ಆಫ್ರಿಕಾದಲ್ಲಿ ನಡೆದ 2010ರ ವಿಶ್ವಕಪ್ ಗೆದ್ದ ಸ್ಪೇನ್ ದೇಶವನ್ನು ಪ್ರತಿನಿಧಿಸಿದ್ದಾರೆ. ಪಿಯೋಲ್ ಅವರು 2010ರ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಗೆಲುವಿನ ಗೋಲು ದಾಖಲಿಸಿದ್ದರು.
Advertisement