
ಬ್ರೆಸಿಲಿಯಾ: ವಿಶ್ವಕಪ್‌ನ ಮೂರನೇ ಸ್ಥಾನಕ್ಕಾಗಿನ ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್ ತಂಡ 3-0 ಗೋಲುಗಳಿಂದ ಹಾಲೆಂಡ್ ವಿರುದ್ಧ ಸೋತ ಹಿನ್ನೆಲೆಯಲ್ಲಿ, ಕ್ರೀಡಾಂಗಣದಲ್ಲಿ ನೆರೆದಿದ್ದ ಆತಿಥೇಯ ತಂಡದ ಅಭಿಮಾನಿಗಳು ಅಸಹ್ಯಪಟ್ಟುಕೊಂಡದ್ದು ಕಂಡುಬಂದಿತು. ಅಲ್ಲದೆ, ನೆರೆದವರೆಲ್ಲ ಫೈನಲ್ ಪಂದ್ಯದಲ್ಲಿ ಜರ್ಮನಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಬ್ರೆಜಿಲ್ ತಂಡವನ್ನು ಭಾರೀ ಅಂತರದಿಂದ ಮುಖಭಂಗ ಮಾಡುವ ಮೂಲಕ, ಜಯ ಕಂಡಿದ್ದ ಜರ್ಮನಿ ತಂಡವೇ ನೆರೆಯ ಅರ್ಜೆಂಟೀನಾ ಎದುರು ಗೋಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. ರಿಯೋದಲ್ಲಿ ಕೆಲ ಅಭಿಮಾನಿಗಳು ಪಂದ್ಯದ ಮುಕ್ತಾಯದವರೆಗೂ ವೀಕ್ಷಿಸಿದರೆ, ಇನ್ನು ಕೆಲ ಅಭಿಮಾನಿಗಳು, ಪಂದ್ಯದಲ್ಲಿ ಹಾಲೆಂಡ್ ಪಾರಮ್ಯವನ್ನು ಸಹಿಸಲಾರದೆ, ಕೊಪಾಕಬಾನಾ ಬೀಚ್‌ನಲ್ಲಿ ಮಿಂದೇಳಲು ಸಾಗಿದರು.ಮೊದಲಾರ್ಧ ಪಂದ್ಯದಲ್ಲಿ ಬ್ರೆಜಿಲ್ 2-0 ಅಂತರದಿಂದ ಹಿನ್ನಡೆ ಅನುಭವಿಸಿದ್ದು, ಅಭಿಮಾನಿಗಳು ಸ್ಟೇಡಿಯಂನಿಂದ ಎದ್ದು ಹೋರಡುವಂತೆ ಮಾಡಿತು. ಪಂದ್ಯದ ಸಮಯದಲ್ಲಿ ನೆರೆದಿದ್ದ ಹೆಚ್ಚಿನ ಅಭಿಮಾನಿಗಳು ಸೋಲನುಭವಿಸಿದ ಆತಿಥೇಯ ತಂಡವನ್ನು ಹೀಗಳೆದರೆ, ಜರ್ಮನಿ ತಂಡ ಫೈನಲ್‌ನಲ್ಲಿ ಗೆಲ್ಲಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement