
ಬ್ರೆಸಿಲಿಯಾ: ಬ್ರೆಜಿಲ್ ಫುಟ್ಬಾಲ್ ತಂಡ ಫಿಫಾ ವಿಶ್ವಕಪ್ ಪಂದ್ಯಾವಳಿಯ ಉಪಾಂತ್ಯದಲ್ಲಿ ಜರ್ಮನಿ ವಿರುದ್ಧ ಹಿನಾಯ ಸೋಲನುಭವಿಸಿದ ಹಿನ್ನಲೆಯಲ್ಲಿ ತಂಡದ ಕೋಚ್ ಲೂಯಿಜ್ ಫೆಲಿಪ್ ಸ್ಕೊಲಾರಿ, ತಮ್ಮ ಸ್ಥಾನದ ಬಗೆಗಿನ ನಿರ್ಧಾರವನ್ನು ಬ್ರೆಜಿಲ್ ಫುಟ್ಬಾಲ್ ಫೆಡರೇಷನ್‌ಗೆ ಬಿಟ್ಟಿದ್ದಾರೆ. ಕೋಚ್ ಸ್ಥಾನದ ಬಗ್ಗೆ ಫೆಡರೇಷನ್ ಅಧ್ಯಕ್ಷರು ನಿರ್ಧಾರ ತೆಗೆದುಕೊಳ್ಳುತ್ತಾರೆ. ತಂಡದಲ್ಲಿ ಏನು ಆಗಬೇಕು ಎಂಬುದರ ಬಗ್ಗೆ ವರದಿಯನ್ನು ಸಲ್ಲಿಸಿದ್ದು, ಮುಂದಿನ ನಿರ್ಧಾರ ಅವರಿಗೆ ಬಿಟ್ಟದ್ದು ಎಂದು ತಿಳಿಸಿದ್ದಾರೆ. ನನ್ನ ಭವಿಷ್ಯದ ಬಗ್ಗೆ ಚರ್ಚಿಸಲು ಇಚ್ಛಿಸುವುದಿಲ್ಲ. ಗೆಲುವಾಗಲಿ ಸೋಲಾಗಲಿ, ನಾವು ಸಾಧಿಸಿರುವುದಷ್ಟೆ. ಟೂರ್ನಿಯ ಅಂತರದಲ್ಲಿ ನಾವು ಎಡವಿದೆವು. ಆದರೆ ನಾಲ್ಕನೇ ಸ್ಥಾನ ಪಡೆದಿದ್ದೇವೆ ಹಾಗಾಗಿ ತಂಡದ ಆಟಗಾರರಿಗೆ ಅಭಿನಂದನೆ ಸಲ್ಲಿಸುತ್ತೆನೆ ಎಂದು ಸ್ಕೊಲಾರಿ ತಿಳಿಸಿದರು. ಜರ್ಮನಿ ವಿರುದ್ಧದ ಉಪಾಂತ್ಯದದ ಪಂದ್ಯಾದಲ್ಲಿ ತಂಡ ಕೆಲವು ಬಾರಿ ನಿಯಂತ್ರಣ ಸಾಧಿಸಿತ್ತು. ಆದರೆ ಅದನ್ನು ಬಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗೆಂದು ತಂಡವನ್ನು ದೂರುವುದು ಸರಿಯಲ್ಲ. ಈ ತಂಡ ಉತ್ತಮವಾಗಿ ರೂಪುಗೊಳ್ಳುತ್ತಿದ್ದು, 2018ರ ವಿಶ್ವಕಪ್‌ನಲ್ಲಿ ಪ್ರಬಲ ತಂಡವಾಗಿ ಹೊರ ಹೊಮ್ಮಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement