
ಬ್ರೆಸಿಲಿಯಾ: ಪ್ಲೇ-ಆಫ್ ಪಂದ್ಯದ ಮಧ್ಯದಲ್ಲಿ ಬ್ರೆಜಿಲ್ ಆಟಗಾರ ಮ್ಯಾಕ್ಸ್‌ವೆಲ್ ಅವರೊಂದಿಗೆ ಡಿಕ್ಕಿ ಹೊಡೆದ ಹಾಲೆಂಡ್‌ನ ಡರ್ಕ್ ಕ್ಯುಟ್ ತೀವ್ರವಾಗಿ ಗಾಯಗೊಂಡರು. ಅವರ ತಲೆಯಿಂದ ಸೋರುತ್ತಿದ್ದ ರಕ್ತವೇ ಇದಕ್ಕೆ ಸಾಕ್ಷಿಯಾಗಿತ್ತು. ಸ್ಥಳಕ್ಕೆ ಆಗಮಿಸಿದ ಹಾಲೆಂಡ್‌ನ ವೈದ್ಯಕೀಯ ತಂಡ, ಡರ್ಕ್ ಅವರಿಗೆ ಚಿಕಿತ್ಸೆ ನೀಡಿತು. ರಕ್ತ ಸೋರುವಿಕೆ ತಡೆಗಟ್ಟಲು ಮೈದಾನದಲ್ಲೇ ಅವರ ತಲೆಯಲ್ಲಿ ಹೊಲಿಗೆಗಳನ್ನು ಹಾಕಲಾಯಿತು. ಅಷ್ಟೊಂದು ಗಾಯಗೊಂಡ ನಂತರವೂ ಚಿಕಿತ್ಸೆ ಪಡೆದ ಡರ್ಕ್ ಆಟ ಮುಂದುವರಿಸಿದರು.
Advertisement