

ಫುಟ್ಬಾಲ್ ವಿಶ್ವಕಪ್ ಹೋರಾಟಕ್ಕೆ ಸಿದ್ಧವಾಗಿರುವ ಜರ್ಮನಿಗೆ ದಿಢೀರ್ ಆಘಾತವೊಂದು ಉಂಟಾಗಿದೆ. ಕಾರಣ ಗಾಯಗೊಂಡಿರುವ 25 ವರ್ಷದ ಆಟಗಾರ ಮಾರ್ಕೋ ರ್ಯೂಸ್ ವಿಶ್ವಕಪ್ಗೆ ಅಲಭ್ಯರಾಗುವ ಸಾಧ್ಯತೆಗಳಿವೆ. ಶುಕ್ರವಾರ ಆರ್ಮೆನಿಯಾ ವಿರುದ್ಧ ನಡೆದ ಸೌಹಾರ್ದ ಪಂದ್ಯದಲ್ಲಿ ರ್ಯೂಸ್ ಗಾಯಗೊಂಡಿದ್ದಾರೆ. ಈ ಪಂದ್ಯದಲ್ಲಿ ಜರ್ಮನಿ 6-1 ಗೋಲುಗಳಿಂದ ಗೆದ್ದಿತು. ಮಾಯಿಂಜ್ನಲ್ಲಿ ನಡೆದ ಮೊದಲಾರ್ಧ ಪಂದ್ಯ ಮುಕ್ತಾಯಗೊಳ್ಳುವ ಮುನ್ನ ಗಾಯಗೊಂಡ ರ್ಯೂಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯ ತೀವ್ರವಾಗಿದೆ ಎಂದು ಸ್ಕ್ಯಾನಿಂಗ್ನಿಂದ ಬಹಿರಂಗವಾಗಿದೆ. ರ್ಯೂಸ್ ಬ್ರೆಜಿಲ್ಗೆ ತೆರಳಲಿದ್ದಾರೆ ಅಥವಾ ಇಲ್ಲ ಎಂಬುದನ್ನು ನಂತರವಷ್ಟೇ ಖಚಿತಪಡಿಸುವುದಾಗಿ ಜರ್ಮನಿ ಫುಟ್ಬಾಲ್ ಸಂಸ್ಥೆ ತಿಳಿಸಿದೆ.