

ಫೋರ್ಟಾಲೆಜಾ: ಎರಡು ಬಾರಿಯ ಚಾಂಪಿಯನ್ ಉರುಗ್ವೆ ತನ್ನ ಮೊದಲ ಪಂದ್ಯದಲ್ಲಿ ಕೋಸ್ಟ ರಿಕಾ ತಂಡವನ್ನು ಎದುರಿಸಲಿದ್ದು, ಗೆಲ್ಲುವ ನೆಚ್ಚಿನ ತಂಡವಾಗಿದೆ. 1930 ಮತ್ತು 1950ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಉರುಗ್ವೆ ತಂಡ, ಕೋಪಾ ಅಮೆರಿಕದ ಚಾಂಪಿಯನ್ ಸಹ ಆಗಿದೆ.
ಉರುಗ್ವೆ ಮತ್ತು ಕೋಸ್ಟ ರಿಕಾ ಒಟ್ಟಾರೆ 8 ಬಾರಿ ವಿವಿಧ ಟೂರ್ನಿಗಳಲ್ಲಿ ಮುಖಾಮುಖಿಯಾಗಲಿವೆ. ಈ ಪೈಕಿ ಉರುಗ್ವೆ ತಂಡ 6 ಪಂದ್ಯಗಳಲ್ಲಿ ಗೆದ್ದು ಪ್ರಾಬಲ್ಯ ಮೆರೆದಿದೆ. ಕೋಸ್ಟ ರಿಕಾ ಮತ್ತು ಒಂದೇ ಒಂದು ಪಂದ್ಯ ಗೆದ್ದುಕೊಂಡಿಲ್ಲ. ಎರಡು ಪಂದ್ಯಗಳು ಡ್ರಾಗೊಂಡಿವೆ.
ಈ ಬಾರಿ ವಿಶ್ವಕಪ್ಗೆ ಅರ್ಹತೆ ಪಡೆಯಲು ಭಾರಿ ಕಷ್ಟಪಟ್ಟಿದ್ದ ಉರುಗ್ವೆ ತಂಡ ತನ್ನ ಕಳೆದ ಮೂರು ವಿಶ್ವಕಪ್ ಪಂದ್ಯಗಳಲ್ಲಿ ಸೋಲನುಭವಿಸಿದೆ. ಹಾಗಾಗಿ ಈ ಬಾರಿಬ ಟೂರ್ನಿಯಲ್ಲಿ ಅದು ಕೊಂಚ ಒತ್ತಡದಲ್ಲಿದೆ.
ಮತ್ತೊಂದೆಡೆ ಕೋಸ್ಟ ರಿಕಾ ತಂಡ ಕೂಡ ಕಳೆದ ಐದು ಪಂದ್ಯಗಳಲ್ಲಿ ಗೆದ್ದ ಉದಾಹರಣೆಯೇ ಇಲ್ಲ. ವಿಶ್ವಕಪ್ನ ಅರ್ಹತಾ ಹಂತದಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದಾಗಲೂ ಸಹ ಉರುಗ್ವೆ ಎದುರು ಒಂದು ಸೋಲು, ಮತ್ತೊಂದು ಡ್ರಾ ಫಲಿತಾಂಶಕ್ಕೆ ಸಮಾಧಾನಗೊಂಡಿದೆ. ಸಹಜವಾಗಿ ಈ ಪಂದ್ಯದಲ್ಲಿ ಉರುಗ್ವೆ ಗೆಲ್ಲುವ ನೆಚ್ಚಿನ ತಂಡ ಎಂಬುದರಲ್ಲಿ ಎರಡು ಮಾತಿಲ್ಲ.
ಉರುಗ್ವೆ ಪ್ರಮುಖರು
ಎಡಿನ್ಸನ್ ಕವಾನಿ, ಲೂಯಿಸ್ ಸೂರೆಜ್, ಡೀಗೊ ಲುಗಾನೊ, ಅಲ್ವಾರೊ ಪೆರೇರಾ, ಫರ್ನಾಂಡೊ ಮುಸೇರಾ, ಕ್ರಿಸ್ಟಿಯನ್ ರೋಡ್ರಿಗ್, ಡೀಗೊ ಫೋರ್ಲಾನ್, ಕ್ರಿಸ್ಟಿಯನ್ ಸ್ಟುವಾನಿ, ನಿಕೋಲಾಸ್ ಲೊಡೇರೊ, ಅಲ್ವಾರೊ ಗೋಂಜಾಲೆಜ್.
ಕೋಚ್- ಆಸ್ಕರ್ ವಾಷಿಂಗ್ಟನ್ ಟಾಬರೆಜ್
ಕೋಸ್ಟ ರಿಕಾ
ಬ್ರಯಾನ್ ರ್ಯೂಜ್, ಕೀಲರ್ ನವಾಸ್, ಜಿಯಾನ್ಕಾರ್ಲೊ ಗೋಂಜಾಲೆಜ್, ಜೊಯೆಲ್ ಕ್ಯಾಂಬೆಲ್, ಮೈಕೆಲ್ ಬ್ಯಾರೆಂಟಸ್, ಈಸ್ಟ್ಬನ್ ಗ್ರೆನಾಡೋಸ್, ಮಾರ್ಕೊ ಯುರೇನಾ, ರಾಯ್ ಮಿಲ್ಲರ್.
ಕೋಚ್- ಜಾಜ್ ಲೂಯಿಸ್ ಪಿಂಟೊ.
ಪಂದ್ಯ ಆರಂಭ: ಇಂದು ಮಧ್ಯರಾತ್ರಿ 12.30ಕ್ಕೆ