

ವಿಶ್ವಕಪ್ ಅಭಿಯಾನದ ಮೊದಲ ಪಂದ್ಯದಲ್ಲಿ ಕ್ರೊವೇಷಿಯಾ ವಿರುದ್ಧ 3-1 ಗೋಲುಗಳ ಅಂತರದಿಂದ ಜಯ ಗಳಿಸಿದ ನಂತರ ಬ್ರೆಜಿಲ್ನ ಸ್ಟಾರ್ ಆಟಗಾರ ನೇಮಾರ್ ತಮ್ಮ ಗೆಳತಿ ಗ್ಯಾಬ್ರಿಯಲ್ಲಾ ಲೆಂಜಿ ಅವರೊಂದಿಗೆ ಪ್ರೇಮಿಗಳ ದಿನ ಆಚರಿಸಿದರು. ಸಾಮಾನ್ಯವಾಗಿ ಫೆಬ್ರವರಿ 14ರಂದು ಪ್ರೇಮಿಗಳ ಆಚರಿಸವುದು ಸಂಪ್ರದಾಯ. ಆದರೆ, ನೇಮಾರ್ ಪಾಲಿಗೆ ಜೂನ್ 13 ಪ್ರೇಮಿಗಳ ದಿನವಾಗಿತ್ತು. ಈ ಮಧುರ ಕ್ಷಣವನ್ನು ನೇಮಾರ್ ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದ್ದಾರೆ.