ಸ್ವಿಸ್ ಸವಾಲಿಗೆ ಈಕ್ವೆಡರ್

ಸ್ವಿಸ್ ಸವಾಲಿಗೆ ಈಕ್ವೆಡರ್
Updated on: 

ಬ್ರಾಸಿಲಿಯಾ (ಬ್ರೆಜಿಲ್): ಆರಂಭದಿಂದಲೇ ಈಕ್ವೆಡಾರ್ ತಂಡ ಹೇರಿದ ಒತ್ತಡವನ್ನ ನಿಭಾಯಿಸಿಕೊಂಡು ನಿಧಾನವಾಗಿ ಮೇಲೆದ್ದ ಸ್ವಿಜರ್ಲೆಂಡ್, ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಭಾನುವಾರದ ಮೊದಲ ಪಂದ್ಯದಲ್ಲಿ 2-1 ಗೋಲುಗಳಿಂದ ಜಯದ ಸಂಭ್ರಮ ಆಚರಿಸಿತು.
ನಿಗದಿತ 90 ನಿಮಿಷಗಳಲ್ಲಿ ಉಭಯ ತಂಡಗಳು 1-1 ಅಂತರದಿಂದ ಸಮಬಲ ಸಾಧಿಸಿದ್ದವು. ನಂತರ ನೀಡಲಾದ ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಿಸಿದ ಸ್ವಿಜರ್ಲೆಂಡ್ ಮೇಲುಗೈ ಸಾಧಿಸಿತು. ಆರಂಭದಿಂದಲೇ ಆಕ್ರಮಣಕಾರಿ ದಾಳಿಗೆ ಮುಂದಾದ ಈಕ್ವೆಡಾರ್ ತಂಡ ಸ್ವಿಜರ್ಲೆಂಡ್ ತಂಡದ ಆಟಗಾರರನ್ನು ಒತ್ತಡದಲ್ಲಿ ಸಿಲುಕುವಂತೆ ನೋಡಿಕೊಂಡರು.
ಮೊದಲಾರ್ಧ ಪಂದ್ಯದ ನಂತರ ಬದಲಿ ಆಟಗಾರನಾಗಿ ಬಂದ ಅಡ್ಮೀರ್ ಮೆಮೆಡಿ ಮತ್ತು ಹೆಚ್ಚುವರಿ ಸಮಯದಲ್ಲಿ ಬದಲಿ ಆಟಗಾರನಾಗಿ ಬಂದ ಹ್ಯಾರೀಸ್ ಸೆಫೆರೋವಿಚ್ ಅವರೇ ಸ್ವಿಜರ್ಲೆಂಡ್ ಪರ ಗೋಲು ದಾಖಲಿಸಿದರು. ಹೀಗಾಗಿ ಕೋಚ್ ಆಯ್ಕೆ ಮಾಡಿದ ಬದಲಿ ಆಟಗಾರರೇ ತಂಡಕ್ಕೆ ಬಲವಾಗಿ ಪರಿಣಮಿಸಿದರು.
ಪಂದ್ಯದ 22ನೇ ನಿಮಿಷದಲ್ಲಿ ದೊರಕಿದ ಪ್ರೀ ಕಿಕ್‌ನಲ್ಲಿ ಈಕ್ವೆಡಾರ್‌ನ ವಾಲ್ಟರ್ ಆಯೋವಿ ಪಾಸ್ ಮಾಡಿದ ಚೆಂಡನ್ನು ಪರ ಎನ್ನರ್ ವಾಲೆನ್ಸಿಯಾ ಅವರು ಗೋಲು ಪೆಟ್ಟಿಗೆ ಸೇರುವಲ್ಲಿ ಯಶಸ್ವಿಯಾದರು. ಹೀಗಾಗಿ ಪಂದ್ಯದಲ್ಲಿ ಇಕ್ವೆಡಾರ್ ಮೊದಲು 1-0 ಅಂತರದಿಂದ ಮುನ್ನಡೆ ಸಾಧಿಸಿತ್ತು.
ಆದರೆ, ನಂತರ ನಿಧಾನವಾಗಿ ಚೇತರಿಸಿಕೊಂಡ ಸ್ವಿಜರ್ಲೆಂಡ್ ಗೋಲು ಗಳಿಸುವ ಹಲವಾರು ಅವಕಾಶಗಳನ್ನು ಪಡೆಯಿತಾದರೂ ಸಾಧ್ಯವಾಗಲಿಲ್ಲ. ಹೀಗಾಗಿ ಮೊದಲಾರ್ಧದಲ್ಲಿ ಈಕ್ವೆಡಾರ್ ಮುನ್ನಡೆ ಕಂಡುಕೊಂಡಿತ್ತು.
ದ್ವಿತೀಯಾರ್ಧ ಪಂದ್ಯ ಆರಂಭವಾಗುತ್ತಿದ್ದಂತೆಯೇ ಅಬ್ಬರಿಸಿದ ಸ್ವಿಜರ್ಲೆಂಡ್ ಪರ, 48ನೇ ನಿಮಿಷದಲ್ಲಿ ರಿಕಾರ್ಡೋ ರೊಡ್ರಿಗೆಜ್ ಅವರು ಪಾಸ್ ಮಾಡಿದ ಚೆಂಡನ್ನು ಗೋಲ್ ಪೆಟ್ಟಿಗೆಗೆ ಸೇರಿಸುವಲ್ಲಿ ಯಶಸ್ವಿಯಾದ ಬದಲಿ ಆಟಗಾರನಾಗಿ ಬಂದ ಅಡ್ಮೀರ್ ಮೆಮೆಡಿ ಉಭಯ ತಂಡಗಳು ಸಮಬಲ ಸಾಧಿಸುವಂತೆ ನೋಡಿಕೊಂಡರು.
ನಂತರವೂ ತನ್ನ ಪಾರಮ್ಯವನ್ನು ಮುಂದುವರಿಸಿದ ಸ್ವಿಜರ್ಲೆಂಡ್ ಗೋಲು ದಾಖಲಿಸಲು ಹಲವಾರು ಅವಕಾಶಗಳನ್ನು ಗಿಟ್ಟಿಸಿಕೊಂಡಿತ್ತಾದರೂ, ಈಕ್ವೆಡಾರ್ ಅದಕ್ಕೆ ಅವಕಾಶ ನೀಡಲಿಲ್ಲ. ಆದರೆ, ಅಂತಿಮವಾಗಿ 90ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಬಂದಿದ್ದ ಹ್ಯಾರೀಸ್ ಸೆಫೆರೋವಿಚ್ ಅವರು ಗೋಲು ದಾಖಲಿಸುವ ಮೂಲಕ ಈಕ್ವೆಡಾರ್ ತಂಡ ಸೋಲಿನ ಹಳ್ಳಕ್ಕೆ ಬೀಳುವಂತೆ ಮಾಡಿದರು.
ಇದಕ್ಕೂ ಮುನ್ನ ಈಕ್ವೆಡಾರ್ ಗೋಲು ಗಳಿಸುವ ಸುವರ್ಣವಕಾಶ ಪಡೆದುಕೊಂಡಿತ್ತು. ಆದರೆ, ಅದು ಗೋಲು ದಾಖಲಿಸುವಲ್ಲಿ ಅದು ವೈಫಲ್ಯ ಕಂಡಿತು. ಇದೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಪರಸ್ಪರ ಎದುರಾಗಿದ್ದ ಉಭಯ ತಂಡಗಳಲ್ಲಿ ಈಕ್ವೆಡಾರ್ ಮೇಲುಗೈ ನಿರೀಕ್ಷಿಸಾಗಿತ್ತು. ಆದರೆ, ಸ್ವಿಜರ್ಲೆಂಡ್ ನಿರೀಕ್ಷೆಯನ್ನು ಹುಸಿಯಾಗಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com