ಕಂಗೆಟ್ಟಆಸೀಸ್‌ಗೆ ಹಾಲೆಂಡ್ ಆತಂಕ

ಕಂಗೆಟ್ಟಆಸೀಸ್‌ಗೆ ಹಾಲೆಂಡ್ ಆತಂಕ
Updated on: 

ಪೊರ್ಟೊ ಅಲೆಗ್ರೆ (ಬ್ರೆಜಿಲ್): ಹಾಲಿ ಚಾಂಪಿಯನ್ ಸ್ಪೇನ್ ವಿರುದ್ಧ ಜಯ ಸಾಧಿಸಿ ಸಂಭ್ರಮದಲ್ಲಿ ತೇಲುತ್ತಿರುವ ಹಾಲೆಂಡ್, ಚಿಲಿಗೆ ಸೋತು ಚಳಿಯಿಂದ ನಡುಗುತ್ತಿರುವ ಆಸ್ಟ್ರೇಲಿಯಾ ತಂಡಗಳು ಬುಧವಾರ ನಡೆಯಲಿರುವ ಪಂದ್ಯದಲ್ಲಿ ಹೋರಾಟ ನಡೆಸಲಿವೆ.
ಪಂದ್ಯದಲ್ಲಿ ಹಾಲೆಂಡ್ ಗೆಲ್ಲುವ ಫೇವರಿಟ್. ಆದರೆ, ಆಸ್ಟ್ರೇಲಿಯಾ ತಂಡದ ನಾಯಕ ಮ್ಯಾಥ್ಯೂ ಲೆಕೀ ತಮ್ಮ ತಂಡ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ.            ಆದರೆ, ಮೊದಲ ಪಂದ್ಯದಲ್ಲಿ 5-1 ಅಂತರದಿಂದ ಗೆದ್ದಿರುವ ಹಾಲೆಂಡ್ ತಂಡವನ್ನು, ಚಿಲಿ ವಿರುದ್ಧ 3-1 ಅಂತರದಿಂದ ಸೋತಿರುವ ಆಸ್ಟ್ರೇಲಿಯಾ ಸೋಲಿಸುವುದೇ ಎಂಬುದು ಈಗ ಪ್ರೇಕ್ಷಕರಿಗೆ ಎದುರಾಗಿರುವ  ಪ್ರಮುಖ ಪ್ರಶ್ನೆಯಾಗಿದೆ. ಆದರೆ, ಲೆಕೀ ಸಮರ್ಥನೆಯೇ ಬೇರೆಯಾಗಿದೆ. ಚಿಲಿ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ 15 ನಿಮಿಷದಲ್ಲಿ 2 ಗೋಲು ಬಿಟ್ಟುಕೊಟ್ಟ ನಂತರ ನಾವು ನೀಡಿದ ಪ್ರದರ್ಶನ ಅದ್ಭುತವಾಗಿತ್ತು. ಹೀಗಾಗಿ ಈಗ ಹಾಲೆಂಡ್ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದ್ದೇವೆ ಎನ್ನುತ್ತಿದ್ದಾರೆ.
ಹಾಲೆಂಡ್ ಬಲ: ಜಾಸರ್ ಸಿಲ್ಲೆಸನ್, ಡ್ಯಾಲೆ, ಜೊಯೆಲ್ ವೆಲ್ಟ್‌ಮಾನ್, ಡಾರಿಲ್ ಜನ್‌ಮಾಡ್, ಟೆರಿನ್ಸ್ ಕೊಂಗೊಲೊ, ವೆಸ್ಲಿ ಸ್ನೈಡರ್, ನಿಗೆಲ್ ಡಿ ಜಾಂಗ್, ಜಾರ್ಡಿ ಕ್ಲಾಸೀ, ಜೊನಾಥನ್ ಡಿ ಗುಜ್ಮಾನ್, ರಾಬಿನ್ ವ್ಯಾನ್ ಪರ್ಸಿ, ಅರ್ಜೆನ್ ರೊಬೆನ್.
ಆಸ್ಟ್ರೇಲಿಯಾ ಶಕ್ತಿ: ಮೈಲ್ ಜೆಡಿನಾಕ್, ಕಾಹಿಲ್, ಮಾರ್ಕ್ ಬ್ರೆಸಿಯಾನೋ, ಅಲೆಕ್ಸ್ ವಿಲ್ಕಿನ್ಸನ್, ಜೇಮ್ಸ್ ಟ್ರೋಯಿಸ್, ಜಾಸನ್ ಡೇವಿಡ್ಸನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com