

ಮ್ಯಾಡ್ರಿಡ್: ಸ್ಪೇನ್ ರಾಜಧಾನಿ ಮ್ಯಾಡ್ರಿಡ್ನ ಬಾರ್ಗಳು ಗುರುವಾರ ತುಂಬಿ ತುಳುಕುತ್ತಿದ್ದವು. ಆದರೆ, ಬಾರ್ನಲ್ಲಿ ಸೇರಿದ್ದ ಯಾರ ಮುಖದಲ್ಲೂ ಸಂತಸದ ಕಳೆ ಕಾಣುತ್ತಿರಲಿಲ್ಲ. ಎಲ್ಲರೂ ಗಂಭೀರವಾಗಿ ಚರ್ಚೆಯಲ್ಲಿ ಮುಳುಗಿಕೊಂಡಿದ್ದರು. ಕಾರಣ ಸ್ಪೇನ್ ತಂಡ ವಿಶ್ವಕಪ್ ಪಂದ್ಯಾವಳಿಯ ಗುಂಪು ಹಂತದ 2ನೇ ಪಂದ್ಯದಲ್ಲಿ ಚಿಲಿ ವಿರುದ್ಧ 2-0 ಗೋಲುಗಳಿಂದ ಸೋಲನುಭವಿಸುವ ಮೂಲಕ ಪಂದ್ಯಾವಳಿಯಿಂದ ಹೊರಬಿದ್ದಿತ್ತು.
ತಮ್ಮ ತಂಡದ ಸೋಲಿನ ಕುರಿತು ನಿರಾಸೆ ಅನುಭವಿಸಿದ ಅಲ್ಲಿನ ಅಭಿಮಾನಿಗಳು ಬಾರ್ನಲ್ಲಿ ಕುಳಿತುಕೊಂಡು ತಂಡದ ಸೋಲಿನ ಬಗ್ಗೆ ವಿಶ್ಲೇಷಣೆ ಮಾಡಿದ್ದೇ ದೊಡ್ಡ ಸುದ್ದಿಯಾಗಿದೆ.
'ನಮ್ಮ ತಂಡ ಸೋಲನುಭವಿಸಿದ್ದು ದುಃಖದ ವಿಷಯ. ನನ್ನ ಅನಿಸಿಕೆಯಂತೆ ಪಂದ್ಯಾವಳಿಯಲ್ಲಿ ಅವರು ಆಡಲೇ ಇಲ್ಲ. ಅವರು ತುಂಬಾ ದಣಿದಿದ್ದರು ಎಂದು ಅನಿಸುತ್ತಿದೆ' ಎಂದು ಸ್ಪೇನ್ ತಂಡದ ಟೀ ಶರ್ಟ್ ತೊಟ್ಟು, ಮುಖಕ್ಕೆ ಸ್ಪೇನ್ ಬಣ್ಣ ಬಳಿದುಕೊಂಡಿದ್ದ 34 ವರ್ಷದ ಸೇಲ್ಸ್ಮನ್ ಅಭಿಪ್ರಾಯಪಟ್ಟಿದ್ದಾರೆ. 'ಇದೊಂದು ಅಚ್ಚರಿಯ ಸೋಲು, ನಾನು ಇದನ್ನು ನಿರೀಕ್ಷಿರಲಿಲ್ಲ. ನಮ್ಮ ತಂಡ ಫೈನಲ್ ಪ್ರವೇಶಿಸುತ್ತದೆ ಎಂದು ಅಂದುಕೊಂಡಿದ್ದೆ. ಈ ಪಂದ್ಯದಲ್ಲಿ ಗೆದ್ದರೆ ಸಂಭ್ರಮ ಆಚರಿಸಲು ನಾನು ಸಿದ್ಧವಾಗಿದ್ದೆ. ಆದರೆ, ತಂಡ ಸೋತ ನಂತರ ಅರ್ಧ ಡಜನ್ನಷ್ಟು ಜನರು ಕುಡಿದ ಮತ್ತಿನಲ್ಲಿ ಸಪ್ಪೆ ಮೋರೆ ಹಾಕೊಂಡು ದುರುದುರು ನೋಡುತ್ತ ಹೋಗುವುದನ್ನು ನೋಡಿದೆ' ಎಂದು ಇನ್ನೊಬ್ಬ ಅಭಿಮಾನಿ ತಿಳಿಸಿದ್ದಾರೆ. 'ವರ್ಲ್ಡ್ ಫೇಲ್ಯುಯರ್' ಇದು ಆನ್ಲೈನ್ ಪತ್ರಿಕೆಯೊಂದು ಸೋತ ಫ್ರಾನ್ ತಂಡದ ಸುದ್ದಿಗೆ ನೀಡಿರುವ ಶೀರ್ಷಿಕೆಯಾಗಿದೆ. ಸ್ಪೇನ್ನಲ್ಲಿ ಬೇಡಿಕೆಯ ಕ್ರೀಡಾ ದೈನಿಕ ಎಕೊಡ್ 'ಫೇಲ್ಡ್' ಎಂಬ ಶೀರ್ಷಿಕೆ ನೀಡಿದೆ.