ಸಾಲ್ವೆಡಾರ್: ಪಂದ್ಯಾವಳಿಯಲ್ಲಿ ಅಚ್ಚರಿಯ ಫಲಿತಾಂಶ ನೀಡುವ ಸಾಮರ್ಥ್ಯ ಹೊಂದಿರುವ ಸ್ವಿಜರ್ಲೆಂಡ್, ಫಿಫಾ ವಿಶ್ವಕಪ್ ಪಂದ್ಯಾವಳಿಯ ಇ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಎದುರಿಸಲಿದ್ದು, ಗೆಲವು ದಾಖಲಿಸಲು ಯೋಜನೆ ರೂಪಿಸಿದೆ.
ಶುಕ್ರವಾರ ಸಾಲ್ವೆಡಾರ್ನಲ್ಲಿ ನಡೆಯುವ ಕಾದಾಟದಲ್ಲಿ ಗೆಲವು ದಾಖಲಿಸುವ ತಂಡ ಇ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವುದಲ್ಲದೇ, ಅಂತಿಮ 16ರ ಘಟ್ಟದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿವೆ.
ಉಭಯ ತಂಡಗಳು ತಮ್ಮ ಆರಂಭಿಕ ಪಂದ್ಯದಲ್ಲಿ ಗೆಲವು ದಾಖಲಿಸುವ ಮೂಲಕ ಶುಭಾರಂಭ ಮಾಡಿವೆಯಾದರೂ, ಅದೇ ಲಯವನ್ನು ಮುಂದಿನ ಪಂದ್ಯಗಳಲ್ಲೂ ಮುಂದುವರಿಸಿಕೊಂಡು ಹೋಗಲು ಎದುರು ನೋಡುತ್ತಿವೆ ಹಾಗಾಗಿ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿ ಪರಿಣಮಿಸಿದೆ.
ಇಲ್ಲಿಯವರೆಗೂ ಸ್ವಿಜರ್ಲೆಂಡ್ ಹಾಗೂ ಫ್ರಾನ್ಸ್ ತಂಡಗಳು 36 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ 33 ಸೌಹಾರ್ದ ಪಂದ್ಯಗಳಾಗಿದ್ದು, 3 ವಿಶ್ವಕಪ್ ಪಂದ್ಯಗಳಾಗಿವೆ. ಇದರಲ್ಲಿ 2 ಬಾರಿ ವಿಶ್ವಕಪ್ ಅರ್ಹತಾ ಪಂದ್ಯಗಳಾಗಿದ್ದು, ಮತ್ತೊಂದು ಪಂದ್ಯ ವಿಶ್ವಕಪ್ನ ಗುಂಪು ಹಂತದ ಪಂದ್ಯವಾಗಿದೆ. ಈ ಮೂರು ಪಂದ್ಯಗಳೂ ಡ್ರಾನಲ್ಲಿ ಅಂತ್ಯಗೊಂಡಿದ್ದು, ಉಭಯ ತಂಡಗಳು ಸಮಬಲದ ಹೋರಾಟ ನೀಡುವ ಸಾಮರ್ಥ್ಯ ಹೊಂದಿವೆ.
ಹಾಗಾಗಿ ಈ ಎರಡು ಸಮತೋಲಿತ ತಂಡಗಳ ಕಾದಾಟ ಅಭಿಮಾನಿಗಳಲ್ಲಿ ರೋಚಕ ಪಂದ್ಯದ ನಿರೀಕ್ಷೆ ಹುಟ್ಟಿಸಿದೆ.
ಸ್ವಿಜರ್ಲೆಂಡ್- ಫ್ರಾನ್ಸ್ (ಗುಂಪು-ಇ) ಪಂದ್ಯ ಆರಂಭ: 12.30
6 ರ್ಯಾಂಕ್ 17
36 ಪಂದ್ಯ 36
12 ಜಯ 1515 ಸೋಲು 12
09 ಡ್ರಾ 09
58 ಗೋಲು 62