

ಫೊರ್ಟೆಲೆಜಾ: ಸಬ್ಸ್ಟಿಟ್ಯೂಟ್ ಆಟಗಾರನಾಗಿ ಕಣಕ್ಕಿಳಿದು ತಂಡಕ್ಕೆ ಗೋಲು ತಂದುಕೊಡುವಲ್ಲಿ ಯಶಸ್ವಿಯಾದ ಘಾನಾ ಹಿರಿಯ ಆಟಗಾರ ಮಿರೊಸ್ಲಾವ್ ಕ್ಲೊಸೆ, ಜರ್ಮನಿ ವಿರುದ್ಧದ ರೋಚಕ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.
ಭಾನುವಾರ ನಡೆದ ಜಿ ಗುಂಪಿನ ಪಂದ್ಯದಲ್ಲಿ ಘಾನಾ 2-2 ಗೋಲುಗಳ ಅಂತರದಲ್ಲಿ ಜರ್ಮನಿ ವಿರುದ್ಧ ಡ್ರಾ ಸಾಧಿಸಿತು.
ಮಿರೊಸ್ಲಾವ್ ಕ್ಲೊಸೆ ಪಂದ್ಯದ 71ನೇ ನಿಮಿಷದಲ್ಲಿ ಮಹತ್ವದ ಗೋಲು ದಾಖಲಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡುವುದರ ಜತೆಗೆ, ತಮ್ಮ ವೃತ್ತಿ ಜೀವನದಲ್ಲಿ 15ನೇ ವಿಶ್ವಕಪ್ ಗೋಲು ದಾಖಲಿಸಿದರು. ಈ ಮೂಲಕ ಬ್ರೆಜಿಲ್ನ ಮಾಜಿ ಸ್ಟಾರ್ ಆಟಗಾರ ರೊನಾಲ್ಡೊ ಅವರ ದಾಖಲೆಯನ್ನು ಸಮಗೊಳಿಸಿದ್ದಾರೆ.
ಆರಂಭದಲ್ಲಿ ಉಭಯ ತಂಡಗಳು ರಕ್ಷಣಾತ್ಮಕ ಆಟಕ್ಕೆ ಮುಂದಾದವು. ಪರಿಣಾಮ ಪಂದ್ಯದ ಮೊದಲಾರ್ಧದ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.
ಆದರೆ ಪಂದ್ಯದ ಉತ್ತರಾರ್ಧದಲ್ಲಿ ಚುರುಕಿನ ಆಟಕ್ಕೆ ಮುಂದಾದ ಘಾನ 51ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಮುನ್ನಡೆ ಪಡೆಯಿತು. ಘಾನಾ ಪರ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಮಾರಿಯೊ ಗೊಟ್ಜೆ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವಲ್ಲಿ ಯಶಸ್ವಿಯಾದರು.
ಆನಂತರ ಹೋರಾಟಕಾರಿ ಪ್ರದರ್ಶನ ನೀಡಿದ ಜರ್ಮನಿ ಸತತ ಎರಡು ಗೋಲು ದಾಖಲಿಸುವ ಮೂಲಕ ಪಂದ್ಯದ ಮೇಲಿನ ಹಿಡಿತವನ್ನು ಪಡೆಯಿತು. ಜರ್ಮನಿ ಪರ ಆ್ಯಂಡ್ರೆ ಆಯೂ ಪಿಲೆ 54ನೇ ನಿಮಿಷದಲ್ಲಿ ಹಾಗೂ 63ನೇ ಸ್ಯಾಮೊ ಗೈನ್ ಗೋಲು ದಾಖಲಿಸಿದರು.
ನಂತರ ಪಂದ್ಯ ಜರ್ಮನಿಯ ಪರ ವಾಲುತ್ತಿದ್ದಂತೆ, ಪಂದ್ಯದ ಮಹತ್ವದ ಹಂತವಾದ 71ನೇ ನಿಮಿಷದಲ್ಲಿ ಮಿರೊಸ್ಲಾವ್ ಕ್ಲೊಸೆ ಗೋಲು ದಾಖಲಿಸುವ ಮೂಲಕ ತಂಡಕ್ಕೆ ಮತ್ತೆ ಜೀವ ತುಂಬಿದರು.
ಈ ಮೂಲಕ ಜರ್ಮನಿ 1 ಗೆಲವು, 1 ಡ್ರಾ ಫಲಿತಾಂಶದೊಂದಿಗೆ ಜಿ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದ್ದರೆ, 1 ಸೋಲು ಹಾಗೂ 1 ಡ್ರಾ ಸಾಧಿಸಿರುವ ಘಾನಾ 3ನೇ ಸ್ಥಾನದಲ್ಲಿದೆ.
ಜೂ.26ರಂದು ಜರ್ಮನಿ ಅಮೆರಿಕ ವಿರುದ್ಧ ಹಾಗೂ ಘಾನಾ ಪ್ರಬಲ ಪೋರ್ಚುಗಲ್ ವಿರುದ್ಧ ಕಾದಾಟ ನಡೆಸಲಿದ್ದು, ಅಂತಿಮ 16ರ ಘಟ್ಟಕ್ಕೆ ತಲುಪಲು ಉಭಯ ತಂಡಗಳು ಗೆಲವು ಅನಿವಾರ್ಯತೆಯಾಗಿದೆ.
ಜರ್ಮನಿ ತಂಡದ ಥಾಮಸ್ ಮುಲ್ಲರ್ ಘಾನಾ ವಿರುದ್ಧದ ಪಂದ್ಯದ ವೇಳೆ ಎದುರಾಳಿ ತಂಡದ ಜಾನ್ ಬೋಯ್ಗೆ ಡಿಕ್ಕಿ ಹೊಡೆದ ನಂತರ ಬಲ ಕಣ್ಣಿನ ಬಳಿ ರಕ್ತಸ್ರಾವವಾಗುತ್ತಿರುವುದು.