

ಸ್ಯಾಂಟೋಸ್: ಫುಟ್ಬಾಲ್ ಇತಿಹಾಸದ ದಂತಕತೆ ಹಾಗೂ ಬ್ರೆಜಿಲ್ ಫುಟ್ಬಾಲ್ ತಂಡದ ಯಶಸ್ಸಿನ ರೂವಾರಿ ಪೀಲೆ ಪ್ರಸಕ್ತ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣ ಪೀಲೆ ಅವರಿಗೆ ಆಮಂತ್ರಣ ಸಿಕ್ಕಿಲ್ಲ ಎಂಬ ಮಾತು ಕೇಳಿ ಬಂದಿವೆ. ವಿಶ್ವಕಪ್ ಪಂದ್ಯಾವಳಿ ತವರಿನಲ್ಲೇ ನಡೆಯುತ್ತಿದ್ದರೂ, ಪೀಲೆ ಗೈರು ಸಾಕಷ್ಟು ಜನರಲ್ಲಿ ಅಚ್ಚರಿ ಮೂಡಿಸಿದೆ. ಸಾವೊ ಪೊಲೊದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷ ಡಿಲ್ಮಾ ರೌಸೆಫ್ ಸೇರಿದಂತೆ ಪ್ರಮುಖ ಗಣ್ಯರು ಆಗಮಿಸಿದ್ದರು. ಆದರೆ ಪೀಲೆ ಅನುಪಸ್ಥಿತಿ ಎದ್ದುಕಾಣುತ್ತಿತ್ತು. ಇನ್ನು ಬ್ರೆಜಿಲ್ನ ಮೊದಲ ಪಂದ್ಯಕ್ಕೂ ಆಗಮಿಸಿದ ಪೀಲೆ, ನಂತರ ಎರಡನೇ ಪಂದ್ಯದ ವೀಕ್ಷಣೆಗೂ ಆಗಮಿಸಲಿಲ್ಲ. ಟಿವಿವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಪೀಲೆ ತಾವು ಬ್ರೆಜಿಲ್ನ ಟ್ರಾಫಿಕ್ನಲ್ಲಿ ಸಿಕ್ಕಿಕೊಂಡಿದ್ದಾಗಿ ತಿಳಿಸಿದ್ದಾರೆ. 1950ರಲ್ಲಿ ಮೊದಲ ಬಾರಿಗೆ, ನಂತರ ಈಗ ನಾನು ರೇಡಿಯೊದಲ್ಲಿ ಫುಟ್ಬಾಲ್ ಪಂದ್ಯದ ವಿಶ್ಲೇಷಣೆ ಕೇಳಿದ್ದಾಗಿ ತಿಳಿಸಿದ್ದಾರೆ.