

ಬ್ರೆಜಿಲ್ನಲ್ಲಿ ವಿಶ್ವಕಪ್ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚುತ್ತಿದ್ದು, ತಮ್ಮ ಅಲಂಕಾರದಿಂದ ಹಿಡಿದು, ನಾಯಿಗಳಿಗೆ ಧರಿಸುವ ಬಟ್ಟೆ, ಅಷ್ಟೇ ಅಲ್ಲ ಲೈಂಗಿಕ ಕ್ರಿಯೆಯ ವೇಳೆಯಲ್ಲಿನ ಕಾಂಡಮ್ವರೆಗೂ ಬ್ರೆಜಿಲ್ ಬಣ್ಣವಾಗಿ ರೂಪುಗೊಳ್ಳುತ್ತಿದೆ.
ಅಭಿಮಾನಿಗಳು ತಮ್ಮ ಉಗುರು ಬಣ್ಣ, ಅವರ ಬಟ್ಟೆ ಸೇರಿದಂತೆ ಇತರೆ ವಸ್ತುಗಳಲ್ಲೂ ಬ್ರೆಜಿಲ್ನ ಚಿಹ್ನೆ ಒಳಗೊಂಡಿದ್ದು, ಬ್ರೆಜಿಲ್ನ ರಾಷ್ಟ್ರ ಚಿಹ್ನೆಯ ಬಣ್ಣದ ಕಾಂಡಮ್ ಬಳಸುವಷ್ಟು ಮಟ್ಟಿಗೆ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿದೆ. ಅಲ್ಲದೆ ಕಾಂಡಮ್ಗಳಲ್ಲಿ ಆಟಗಾರರ ಹೆಸರು ಹಾಗೂ ಅವರ ಜೆರ್ಸಿಯ ಸಂಖ್ಯೆಯನ್ನು ಬಳಸಲಾಗಿದ್ದು, ಅಭಿಮಾನಿಗಳ ಕ್ರೇಜ್ಗೆ ಮಿತಿಯೇ ಇಲ್ಲದಂತಾಗಿದೆ. ಬ್ರೆಜಿಲ್ನ ಬೀದಿಬೀದಿಗಳಲ್ಲಿ ಈ ರೀತಿಯ ಅನೇಕ ವಸ್ತುಗಳೆಲ್ಲ ಬ್ರೆಜಿಲ್ಮಯವಾಗಿವೆ.