ಹಾಲೆಂಡ್‌ಗೆ ಹ್ಯಾಟ್ರಿಕ್ ಜಯ

ಮತ್ತೊಂದು ಅದ್ಭುತ ಪ್ರದರ್ಶನ ನೀಡಿದ ಹಾಲೆಂಡ್ ಆಟಗಾರರು ಸತತ...
ಹಾಲೆಂಡ್‌ಗೆ ಹ್ಯಾಟ್ರಿಕ್ ಜಯ
Updated on: 

ಸೌಪೊಲೊ: ಮತ್ತೊಂದು ಅದ್ಭುತ ಪ್ರದರ್ಶನ ನೀಡಿದ ಹಾಲೆಂಡ್ ಆಟಗಾರರು ಸತತ ಮೂರನೇ ಗೆಲವಿನೊಂದಿಗೆ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ 'ಬಿ' ಗುಂಪಿನಿಂದ ಅಗ್ರ ತಂಡವಾಗಿ ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.           ಎರೆನಾ ಕೋರಿಂಥಿಯನ್ಸ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ  ಮುಖಾಬಲದಲ್ಲಿ ಹಾಲೆಂಡ್ ತಂಡ 2-0 ಗೋಲಿನಿಂದ ಚಿಲಿ ತಂಡವನ್ನು ಸೋಲಿಸಿತು. ಪಂದ್ಯದ 75ನೇ ನಿಮಿಷದಲ್ಲಿ ಸ್ನೈಡರ್ ಸ್ಥಾನದಲ್ಲಿ ಬದಲಿ ಆಟಗಾರರಾಗಿ ಮೈದಾನಕ್ಕಿಳಿದ ಫೆರ್, ಎರಡು ನಿಮಿಷ ಕಳೆಯುವಷ್ಟರಲ್ಲಿ (77ನೇ ನಿಮಿಷ) ಹೆಡ್ ಮಾಡುವ ಮೂಲಕ ಆಕರ್ಷಕ ಗೋಲು ಗಳಿಸಿದರು. ಇನ್ನು ಕೊನೆಯಲ್ಲಿ ಗಾಯದ ಹೆಚ್ಚುವರಿ ಸಮಯದ ಆಟದಲ್ಲಿ ಮೆಂಫಿಸ್ ದೇಪೆ (90೤2ನೇ ನಿಮಿಷ) ಗೋಲು ಗಳಿಸಿ ತಂಡದ ಗೆಲವಿನ ಅಂತರ ಹಿಗ್ಗಿಸಿದರು.
ಟೂರ್ನಿಯ ಆರಂಭದಿಂದಲೇ ಅತ್ಯುತ್ತಮ ಪ್ರದರ್ಶನ ನೀಡುಕ್ತಿರುವ ಹಾಲೆಂಡ್ ಆಟಗಾರರು ಅಂತಿಮ ಲೀಗ್ ಪಂದ್ಯದಲ್ಲೂ ಗುಣಮಟ್ಟದ ಪ್ರದರ್ಶನ ನೀಡಿ ಗಮನ ಸೆಳೆದರು. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸ್ಪೇನ್ ವಿರುದ್ಧ 5-1 ಗೋಲುಗಳ ಭಾರಿ ಗೆಲವು ಮತ್ತು ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 3-2 ಗೋಲುಗಳಿಂದ ಜಯ ಸಂಪಾದಿಸಿದ್ದ ಹಾಲೆಂಡ್ ಸಾಂಘಿಕ ಶಕ್ತಿಯ ಪ್ರದರ್ಶನ ನೀಡುವ ಮೂಲಕ ಚಿಲಿ ವಿರುದ್ಧವೂ ಜಯಗಳಿಸಿ ಅಜೇಯ ತಂಡವಾಗಿ ನಾಕೌಟ್ ತಲುಪಿತು. ಮತ್ತೊಂದೆಡೆ ಸ್ಪೇನ್ ವಿರುದ್ಧ 2-0ಯಿಂದ ಹಾಗೂ ಆಸ್ಟ್ಟ್ರೇಲಿಯಾ ವಿರುದ್ಧ 3-1ರಿಂದ ಸತತ ಜಯ ಸಾಧಿಸಿದ್ದ ಚಿಲಿ ತಂಡ ಇಲ್ಲಿ ಮಾತ್ರ ಗೆಲವು ದಕ್ಕಿಸಿಕೊಳ್ಳಲಾಗಲಿಲ್ಲ.
ಹಾಲೆಂಡ್-2
ಲೆರೊಯ್ ಫೆರ್- 77ನೇ ನಿಮಿಷ
ಮೆಂಫಿಸ್ ದೇಪೆ-
90೤2ನೇ ನಿಮಿಷ
ಚಿಲಿ-0

ಹಾಲೆಂಡ್ ಪರ ಗೋಲು ಗಳಿಸಿದ ಲೆರೊಯ್ ಫೆರ್ ಸಂಭ್ರಮ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com