ಚಿಲಿಗೆ ಸೀಜರ್ ಆದ ಗೋಲಿ

ವಿಶ್ವಕಪ್ ಪಂದ್ಯಾವಳಿಯ ಮೊದಲ ನಾಕೌಟ್ ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್ ತಂಡ ಚಿಲಿ...
ಚಿಲಿಗೆ ಸೀಜರ್ ಆದ ಗೋಲಿ
Updated on: 

ಬೆಲೊ ಹಾರಿಜಾಂಟ್: ವಿಶ್ವಕಪ್ ಪಂದ್ಯಾವಳಿಯ ಮೊದಲ ನಾಕೌಟ್ ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್ ತಂಡ ಚಿಲಿ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳ ಅಂತರದಿಂದ ಜಯ ಸಾಧಿಸಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ಮೂರು ಗೋಲುಗಳನ್ನು ತಡೆಯುವಲ್ಲಿ ಯಶಸ್ವಿಯಾದ ಬ್ರೆಜಿಲ್ ಗೋಲ್ ಕೀಪರ್ ಜೂಲಿಯೋ ಸೀಜರ್, ಚಿಲಿ ತಂಡಕ್ಕೆ ನಿಜವಾದ ಸೀಜರ್ ಆಗಿ ಪರಿಣಮಿಸಿದರು. ಅಲ್ಲದೆ ಅವರೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದರೊಂದಿಗೆ ಚಿಲಿ ನೀಡಿದ್ದ ದೊಡ್ಡ ಸವಾಲಿನಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಬ್ರೆಜಿಲ್ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಪಂದ್ಯ ನಿಗದಿತ ಸಮಯದಲ್ಲಿ 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಅರ್ಧ ಗಂಟೆ ಹೆಚ್ಚುವರಿ ಸಮಯ ನೀಡಲಾಯಿತು. ಆಗಲೂ ಉಭಯ ತಂಗಳು ಗೋಲು ದಾಖಲಿಸಲು ವೈಫಲ್ಯ ಕಂಡವು. ಈ ಹಿನ್ನೆಲೆಯಲ್ಲಿ ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ಜಾರಿತು.
ಹಲ್ಕ್‌ಗೆ ಇಲ್ಲ ಗೋಲು: ಪಂದ್ಯದ 55ನೇ ನಿಮಿಷದಲ್ಲಿ ಬ್ರೆಜಿಲ್‌ನ ಹಲ್ಕ್ ಅವರು ಚಂಡನ್ನು ಗೋಲ್ ಪೆಟ್ಟಿಗೆಯೊಳಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಹಲ್ಕ್ ಅವರು ಚೆಂಡನ್ನು ಎದೆಯಿಂದ ತಡೆದು ಗೋಲ್ ಪೆಟ್ಟಿಗೆಯತ್ತ ಕಳುಹಿಸುವ ಬದಲು, ಚಂಡಿಗೆ ಕೈಯನ್ನು ತಾಗಿಸಿದ್ದರು. ಹೀಗಾಗಿ ಗೋಲನ್ನು ನಿರಾಕರಿಸಲಾಯಿತು. ಹಲ್ಕ್ ಗೋಲು ದಾಖಲಿಸಿದ ತಕ್ಷಣ ಸಂಭ್ರಮಸಿದ್ದ ಅಂಗಣದಲ್ಲಿನ ಅಭಿಮಾನಿಗಳು, ತಪ್ಪು ಮಾಡಿದ ಹಲ್ಕ್ ಅವರಿಗೆ ಹಳದಿ ಕಾರ್ಡ್ ನೀಡಿದ ತಕ್ಷಣ ಸ್ತಬ್ಧರಾದರು. ಆದರೆ, ಪಂದ್ಯದಲ್ಲಿ ತೀವ್ರ ಚಟುವಟಿಕೆಯಿಂದ ಓಡಾಡಿದ ಹಲ್ಕ್ ಹಲವಾರು ಬಾರಿ ಗೋಲು ದಾಖಲಿಸುವ ಅವಕಾಶವನ್ನು ಗಿಟ್ಟಿಸಿದ್ದರು. ಆದರೆ, ಎದುರಾಳಿ ತಂಡ ಅವರಿಗೆ ಸುಲಭವಾಗಿ ಗೋಲು ದಾಖಲಿಸುವ ಅವಕಾಶವನ್ನು ನೀಡಲಿಲ್ಲ. ಮೊದಲಾರ್ಧ ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್‌ನಷ್ಟೇ ಸಮರ್ಥ ಪ್ರದರ್ಶನ ನೀಡಿದ ಚಿಲಿ ತಂಡ 1-1 ಅಂತರದಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.  ಪಂದ್ಯದ 18ನೇ ನಿಮಿಷದಲ್ಲಿ ಬ್ರೆಜಿಲ್‌ನ ಡೇವಿಡ್ ಲೂಯಿಸ್ ಅವರು ಗೋಲು ದಾಖಲಿಸುವುದರೊಂದಿಗೆ, ಆತಿಥೇಯ ತಂಡ 1-0 ಅಂತರದಿಂದ ಮುನ್ನಡೆ ಸಾಧಿಸಿತು. ಆದರೆ, 32ನೇ ನಿಮಿಷದಲ್ಲಿ ಚಿಲಿ ಪರ ಗೋಲು ದಾಖಲಿಸುವಲ್ಲಿ ಯಶಸ್ವಿಯಾದ ಅಲೆಕ್ಸಿಸ್ ಸಾಂಚೆಜ್ ಅವರು 1-1 ಗೋಲುಗಳ ಅಂತರಿದಂದ ಪಂದ್ಯ ಸಮಬಲಗೊಳ್ಳುವಂತೆ ನೋಡಿಕೊಂಡಿದ್ದರು.
ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಉಭಯ ತಂಡಗಳು ಗೋಲು ದಾಖಲಿಸಲು ಹಲವಾರು ಅವಕಾಶಗಳನ್ನು ಪಡೆದಿದ್ದವು. ಆದರೆ, ನಿರೀಕ್ಷಿಸಿದಷ್ಟು ಗೋಲು ದಾಖಲಾಗಲಿಲ್ಲ. ಆದರೆ, ದ್ವಿತೀಯಾರ್ಧ ಪಂದ್ಯದಲ್ಲಿ ಆತಿಥೇಯ ತಂಡದ ಪ್ರದರ್ಶನದಲ್ಲಿ ಕೊಂಚ ವೈಫಲ್ಯ ಕಂಡಿತು. ಹೀಗಾಗಿ, ತಂಡ ಪಂದ್ಯದಲ್ಲಿ ಪಂದ್ಯದ ನಿಗದಿತ ಸಮಯ ಮುಕ್ತಾಯದವರೆಗೂ 1-1ರಿಂದ ಸಾಗುವಂತೆ ನೋಡಿಕೊಂಡಿತು.
ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್ ತಂಡ ನಾಲ್ಕು ಬಾರಿ ಹಳದಿ ಕಾರ್ಡ್ ಪಡೆದರೆ, ಎದುರಾಳಿ ಚಿಲಿ ಮೂರು ಬಾರಿ ಹಳದಿ ಕಾರ್ಡ್ ಪಡೆಯಿತು. ಹೀಗಾಗಿ ರೆಫರಿ ಒಟ್ಟು 7 ಬಾರಿ ಹಳದಿ ಕಾರ್ಡ್ ತೋರಿಸಿದರು.    

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com