ಉತ್ತರ ಕರ್ನಾಟಕ ಖಡಕ್ ಜೋಳದ ರೊಟ್ಟಿ

ಜೋಳದ ರೊಟ್ಟಿ ಮಾಡುವ ವಿಧಾನ
ಜೋಳದ ರೊಟ್ಟಿ
ಜೋಳದ ರೊಟ್ಟಿ

ಬೇಕಾಗುವ ಸಾಮಾಗ್ರಿಗಳು:

  • ಜೋಳದ ಹಿಟ್ಟು-  3 ಕಪ್
  • ಎಳ್ಳು - 100 ಗ್ರಾಂ
  • ರುಚಿಗೆ ತಕ್ಕಷ್ಟು ಉಪ್ಪು
  • ಕೆಂಪು ಮೆಣಸಿನಕಾಯಿ ಪುಡಿ -ಸ್ವಲ್ಪ
  • ಇಂಗು- ಸ್ವಲ್ಪ
  •  ಎಣ್ಣೆ 1 ಕಪ್
ಮಾಡುವ ವಿಧಾನ:
  • ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟನ್ನು ಹಾಕಿ ಅದಕ್ಕೆ 1 ಕಪ್ ಬಿಸಿ ನೀರು ಹಾಕಿ ಅರ್ಧ ಗಂಟೆ ನೆನೆಯಲು ಬಿಡಿ.
  • ಜೋಳದ ಹಿಟ್ಟಿಗೆ  ಹುರಿದ ಎಳ್ಳು, ಸ್ವಲ್ಪ ಉಪ್ಪು, ಒಣಮೆಣಸಿನ ಪುಡಿ, ಸ್ವಲ್ಪ ಇಂಗು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.
  • ನಂತರ ಅದಕ್ಕೆ ಸ್ವಲ್ಪ ಎಣ್ಣೆ  ಬೆರೆಸಿ ಸರಿಯಾಗಿ ನಾದಿಟ್ಟುಕೊಳ್ಳಿ.
  • ಒಂದು ಗಂಟೆಯ ನಂತರ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ ಚಪಾತಿಯಂತೆ ರೊಟ್ಟಿಗಳನ್ನು ತಯಾರಿಸಿ.
  • ಒಲೆಯ ಮೇಲೆ ತವಾ ಇಟ್ಟು ರೊಟ್ಟಿಯನ್ನು ಅದರ ಮೇಲೆ ಹಾಕಿ ಬೇಯಿಸಿ. ಎರಡೂ ಕಡೆ ಸರಿಯಾಗಿ ಬೇಯಿಸಿ.
  • ತಯಾರಾದ ಬಿಸಿ ಬಿಸಿ ಜೋಳದ ರೊಟ್ಟಿಯನ್ನು ಎಣ್ಣೆಗಾಯಿ, ಚಟ್ನಿಪುಡಿ ಗುರೆಳ್ಳು, ಕುರೆಸಾಣಿ ಪುಡಿ, ಒಳ್ಳೆ ಎಳ್ಳೆಣ್ಣೆ ಜೊತೆ ಸವಿಯಿರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com