ಕ್ಯಾರೆಟ್ ಹಲ್ವ
ಬೇಕಾಗುವ ಪದಾರ್ಥಗಳು
- ಕ್ಯಾರೆಟ್ - 1/2 ಕೆಜಿ
- ಹಾಲು - 1 ಲೀಟರ್
- ಕೋವಾ - 50 ಗ್ರಾಂ
- ಸಕ್ಕರೆ - 1 ಬಟ್ಟಲು
- ತುಪ್ಪ - 10-15 ಚಮಚ
ಮಾಡುವ ವಿಧಾನ...
- ಕ್ಯಾರೆಟ್ ನ್ನು ಸಣ್ಣಗೆ ತುರಿದುಕೊಳ್ಳಬೇಕು. ಒಲೆಯ ಮೇಲೆ ಹಾಲಿಟ್ಟು ಚೆನ್ನಾಗಿ ಕಾಯಿಸಿಕೊಳ್ಳಬೇಕು.
- ನಂತರ ಒಂದು ಪಾತ್ರೆಗೆ ತೆಗೆದುಕೊಂಡು ಇದಕ್ಕೆ ಸ್ವಲ್ಪ 5 ಚಮಚ ತುಪ್ಪ ಹಾಕಿ ಕ್ಯಾರೆಟ್ ನ್ನು ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು.
- ಇದಕ್ಕೆ ಬಿಸಿ ಮಾಡಿಟ್ಟುಕೊಂಡ ಹಾಲು, ಸಕ್ಕರೆ ಹಾಕಿ ಕ್ಯಾರೆಟ್ ನ್ನು ಚೆನ್ನಾಗಿ ಬೇಯಲು ಬಿಡಬೇಕು.
- 25-30 ನಿಮಿಷ ವಾದ ನಂತರ ಹಾಲು ಹಾಗೂ ಕ್ಯಾರೆಟ್ ಚೆನ್ನಾಗಿ ಮಿಶ್ರಣವಾಗಿ ಕ್ಯಾರೆಟ್ ಚೆನ್ನಾಗಿ ಬೆಂದಿರುತ್ತದೆ. ಇದಕ್ಕೆ ಕೋವಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ನಂತರ ಕೆಳಗಿಳಿಸಿಕೊಳ್ಳುವಾಗ ಮಿಕ್ಕಿದ ತುಪ್ಪ ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಕ್ಯಾರೆಟ್ ಹಲ್ವ ಸಿದ್ದವಾಗುತ್ತದೆ.
-ಮಂಜುಳ.ವಿ.ಎನ್
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ