ಅಕ್ಕಿ, ತೆಂಗಿನ ಕಾಯಿ ತುರಿ, ಹಸಿಮೆಣಸಿನಕಾಯಿ, ಅರ್ಧ ಸಾಸಿವೆ ಮತ್ತು ಶುಂಠಿ, ಉಪ್ಪಬೆರೆಸಿ ರುಬ್ಬಿಕೊಳ್ಳಿರಿ. ನಂತರ ಅನ್ನ ತಯಾರಿಸಿಕೊಳ್ಳಿರಿ.
ಮಾವಿನ ಕಾಯಿ ತೊಳೆದು ತುರಿದುಕೊಂಡು ರುಬ್ಬಿದಮಿಶ್ರಣಕ್ಕೆ ಬೆರೆಸಿಕೊಳ್ಳಿರಿ. ಈಗಅಗಲವಾದ ಒಂದುಪಾತ್ರೆಯಲ್ಲಿ ಅನ್ನ ಹಾಕಿ ಅದರ ಮೇಲೆ ರುಬ್ಬಿದ ಮಿಶ್ರಣವನ್ನು ಉದುರಿಸಿ.
ಒಂದು ಕಡಾಯಿಯಲ್ಲಿ ಎಣ್ಣೆ , ಸಾಸಿವೆ, ಕಡಲೆ ಬೇಳೆ-ಉದ್ದಿನಬೇಳೆ, ಕಡಲೇ ಬೀಜ, ಬೆಲ್ಲಹಾಕಿ ಒಗ್ಗರಣೆ ಮಾಡಿಕೊಳ್ಳಿ. ಅದನ್ನು ಅನ್ನದಲ್ಲಿ ಹಾಕಿ ಎಲ್ಲವನ್ನೂಚೆನ್ನಾಗಿಕಲಸಿರಿ. ಈಗ ಕೊತ್ತಂಬರಿ ಸೊಪ್ಪು ಹಚ್ಚಿಕೊಂಡು ಬೆರೆಸಿರಿ. ಈಗರುಚಿಕರ ಮಾವಿನಕಾಯಿಚಿತ್ರಾನ್ನ ತಯಾರಾಗುತ್ತದೆ.