ಪನ್ನೀರ್ ಕರಿಬೇಕಾಗುವ ಸಾಮಾಗ್ರಿಗಳು.250 ಗ್ರಾಂ ಪನ್ನೀರ್2 ಟೇಬಲ್ ಸ್ಪೂನ್ ಎಣ್ಣೆ1 ಈರುಳ್ಳಿ1 ಟೊಮೊಟೊ1 ಟೀ ಸ್ಪೂನ್ ಶುಂಠಿ ಪೇಸ್ಟ್1 ಟೀ ಸ್ಪೂನ್ ಬೆಳ್ಳುಳ್ಳಿ ಪೇಸ್ಟ್1/2 ಸ್ಪೂನ್ ಮೆಣಸಿನಕಾಯಿ ಪುಡಿ1/4 ಸ್ಪೂನ್ ಧನಿಯಾ ಪುಡಿ1/4 ಸ್ಪೂನ್ ಗರಂ ಮಸಾಲ1/2 ಸ್ಪೂನ್ ಜೀರಿಗೆ ಪುಡಿ1/2 ಸ್ಪೂನ್ ಅರಿಶಿನ ಪುಡಿ1 ಟೀ ಸ್ಪೂನ್ ಹೆಚ್ಚಿದ ಹಸಿ ಮೆಣಸಿನಕಾಯಿ 1 ಕಪ್ ನೀರುಉಪ್ಪು.ಮಾಡುವ ವಿಧಾನ.ಮೊದಲಿಗೆ ಪನ್ನೀರ್ ಅನ್ನು ಸಣ್ಣದಾಗಿ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿನಂತರ ಟಮೊಟೊ ಮತ್ತು ಈರುಳ್ಳಿಯನ್ನು ಹೆಚ್ಚಿ ರುಬ್ಬಿಕೊಳ್ಳಿ, ಕಾದ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿರುಬ್ಬಿದ ಟಮೊಟೊ ಈರುಳ್ಳಿ ಮಿಶ್ರಣ ಬೆರೆಸಿ ಹಸಿ ವಾಸನೆ ಹೋಗುವವರೆಗೂ ಬೇಯಿಸಿ.ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಕುದಿಸಿ.ನಂತರ ಧನಿಯಾ ಪುಡಿ, ಜೀರಿಗೆ, ಅರಶಿನ ಪುಡಿ, ಗರಂ ಮಸಾಲಾ, ಮೆಣಸಿನಕಾಯಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.ಚೆನ್ನಾಗಿ ಕುದಿಯತೊಡಗಿದಾಗ ಅದಕ್ಕೆ ಕತ್ತರಿಸಿಕೊಂಡ ಪನ್ನೀರ್ ಮತ್ತು 1 ಕಪ್ ನೀರನ್ನು ಹಾಕಿ ಸುಮಾರು 5 ರಿಂದ 10 ನಿಮಿಷಗಳ ಕಾಲ ಬೆಯಿಸಿ.ಚಪಾತಿ ಇಲ್ಲವೇ ಪರೋಟಾ ಜೊತೆ ತಿನ್ನಲು ಪನ್ನೀರ್ ಕರಿ ರೆಡಿ.- ಶಿಲ್ಪ.ಡಿ.Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos