ಮೊದಲು ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಪುದೀನ, ಗರಂ ಮಸಾಲೆ, ಅರ್ಧ ಚಮಚ ಜೀರಿಗೆ, ಹಸಿಮೆಣಸಿನ ಕಾಯಿ ಎಲ್ಲವನ್ನೂ ಜಾರ್ ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು.
ಮತ್ತೊಂದೆಡೆ ಒಂದು ಪಾತ್ರೆಯಲ್ಲಿ ಬೇಯಿಸಿಕೊಂಡ ಆಲೂಗಡ್ಡೆ, ಉಪ್ಪು, ಕಡಲೆ ಹಿಟ್ಟು ಹಾಗೂ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ಮತ್ತೊಂದು ಪಾತ್ರೆಯಲ್ಲಿ ಮೈದಾಹಿಟ್ಟಿಗೆ ನೀರು ಸೇರಿಸಿ ತೆಳ್ಳಗೆ ಮಾಡಿಕೊಳ್ಳಬೇಕು. ಆಲೂಗಡ್ಡೆಯ ಮಿಶ್ರಣವನ್ನು ಮೈದಾಹಿಟ್ಟಿನಲ್ಲಿ ಅದ್ದಿ ನಂತರ ರವೆಯಲ್ಲಿ ಹೊರಳಿಸಿ ಒಂದು ತಟ್ಟೆಯಲ್ಲಿಟ್ಟುಕೊಳ್ಳಬೇಕು.
ನಂತರ ಒಲೆಯ ಮೇಲೆ ಬಾಣಲೆ ಇಟ್ಟು. ಎಣ್ಣೆ ಹಾಕಿ ಚೆನ್ನಾಗಿ ಕಾಯಲು ಬಿಡಬೇಕು.
ಎಣ್ಣೆ ಕಾದ ನಂತರ ಉಂಡೆ ಮಾಡಿಕೊಂಡ ಆಲೂ ಮಿಶ್ರಣವನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ಆಲೂ ಕಬಾಬ್ ತಯಾರಾಗುತ್ತದೆ.