ಕಡಲೆಬೀಜದ ಚಿಕ್ಕಿ

ಕಡಲೆಬೀಜದ ಚಿಕ್ಕಿ ಮಾಡುವ ವಿಧಾನ...
ಕಡಲೇಬೀಜದ ಚಿಕ್ಕಿ
ಕಡಲೇಬೀಜದ ಚಿಕ್ಕಿ

ಬೇಕಾಗುವ ಪದಾರ್ಥಗಳು

  • ಕಡಲೆಬೀಜ ಒಂದು ಕಪ್
  • ಬೆಲ್ಲ 1 ಕಪ್ (ಪುಡಿ ಮಾಡಿದ್ದು)
  • ಏಲಕ್ಕಿ- 4
ಮಾಡುವ ವಿಧಾನ
  • ಮೊದಲಿಗೆ ಕಡಲೆ ಬೀಜ ಹುರಿದು ಪುಡಿ ಮಾಡಿಟ್ಟುಕೊಳ್ಳಿ.
  • ಆಮೇಲೆ ಸ್ಟವ್ ಹಚ್ಚಿ ಅದರ ಮೇಲೆ ದಪ್ಪ ತಳ ಇರುವ ಪಾತ್ರೆ ಇಡಿ
  • ಪಾತ್ರೆಗೆ ಬೆಲ್ಲ ಹಾಕಿ 2 ಚಮಚ ನೀರು ಸೇರಿಸಿ
  • ಬೆಲ್ಲ ಕರಗಿ ಎಳೆ ಪಾಕ ಬಂದ ಕೂಡಲೇ ಅದಕ್ಕೆ ಪುಡಿ ಮಾಡಿದ ಕಡಲೆ ಬೀಜ ಸೇರಿಸಿ
  • ನಂತರ ಅದಕ್ಕೆ ಏಲಕ್ಕಿ ಪುಡಿ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿ
  • ಆಮೇಲೆ ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿ ಅದರ ಮೇಲೆ ಮಿಕ್ಸ್ ಹಾಕಿ
  • ಬಿಸಿ ಇರುವಾಗಲೇ ಬೇಕಾದ ಆಕಾರಕ್ಕೆ ಚಿಕ್ಕಿಯನ್ನು ಕತ್ತರಿಸಿ
  • ಮನೆಯಲ್ಲೇ ತಯಾರಿಸಿದ ಶುಚಿರುಚಿಯಾದ ಕಡಲೆಬೀಜದ ಚಿಕ್ಕಿ ತಿನ್ನಲು ಸಿದ್ದ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com