ಹಾರ್ಲಿಕ್ಸ್ ಬರ್ಫಿ

ಹಾರ್ಲಿಕ್ಸ್ ಬರ್ಫಿ ಮಾಡುವ ವಿಧಾನ...
ಹಾರ್ಲಿಕ್ಸ್ ಬರ್ಫಿ
ಹಾರ್ಲಿಕ್ಸ್ ಬರ್ಫಿ

ಹಾರ್ಲಿಕ್ಸ್ ಬರ್ಫಿ ಬೇಕಾಗುವ ಪದಾರ್ಥಗಳು

  • ಕಡ್ಲೆ ಹಿಟ್ಟು- 1 ಕಪ್
  • ಹಾರ್ಲಿಕ್ಸ್- 1/2 ಕಪ್
  • ಸಕ್ಕರೆ  - 1 ಕಪ್
  • ತುಪ್ಪ 1 ಕಪ್
  • ಹಾಲು - 2/1ಕಪ್
  • ಕತ್ತರಿಸಿದ ಬಾದಾಮಿ

ಮಾಡುವ ವಿಧಾನ..

  • ಮೊದಲಿಗೆ ಪ್ಯಾನ್ ನಲ್ಲಿ ಸ್ವಲ್ಪ ತುಪ್ಪ ಹಾಕಿ ಕಡಲೆ ಹಿಟ್ಟನ್ನು ಹೊಂಬಣ್ಣ ಬರುವವರೆಗೂ ಹುರಿದುಕೊಳ್ಳಬೇಕು.
  • ನಂತರ ಮತ್ತೊಂದು ಬಟ್ಟಲಲ್ಲಿ ಹಾಲು ಮತ್ತು ಸಕ್ಕರೆಯನ್ನು ಬೆರೆಸಿ (ಎಳೆ) ಪಾಕ ಬರುವವರೆಗೂ ಕುದಿಸಬೇಕು.
  • ನಂತರ ಅದಕ್ಕೆ ಹುರಿದ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಅದು ಸ್ವಲ್ಪ ಗಟ್ಟಿಯಾಗುತ್ತಾ ಬಂದಾಗ ಅದಕ್ಕೆ ಹಾರ್ಲಿಕ್ಸ್ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
  • ಉಳಿದ ತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಪಾತ್ರೆಯ ತಳ ಬಿಡುವವರೆಗೂ ಮಿಕ್ಸ್ ಮಾಡಿ.
  • ನಂತರ ಒಂದು ಟ್ರೇ ಗೆ ಸ್ವಲ್ಪ ತುಪ್ಪ  ಸವರಿ  ಮಿಶ್ರಣವನ್ನು ಅದಕ್ಕೆ ಸುರಿಯಿರಿ. ಅದರ ಮೇಲೆ ಕತ್ತರಿಸಿದ ಬಾದಾಮಿ ಹಾಕಿ ಅಲಂಕರಿಸಿ
  • ಐದು ನಿಮಿಷಗಳ ನಂತರ ನಿಮಗೆ ಬೇಕಾದ ಆಕಾರದಲ್ಲಿ ಹಾರ್ಲಿಕ್ಸ್ ಬರ್ಫಿಯನ್ನು ಕತ್ತರಿಸಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com