ಮೈಸೂರು ಶೈಲಿ ನಾಟಿ ಕೋಳಿ ಸಾರು

ಮೈಸೂರು ಶೈಲಿ ನಾಟಿ ಕೋಳಿ ಸಾರು ಮಾಡುವ ವಿಧಾನ
ಮೈಸೂರು ಶೈಲಿ ನಾಟಿ ಕೋಳಿ ಸಾರು
ಮೈಸೂರು ಶೈಲಿ ನಾಟಿ ಕೋಳಿ ಸಾರು
ಬೇಕಾಗುವ ಸಾಮಾಗ್ರಿಗಳು
  • 1 ಕೆಜಿ ನಾಟಿಕೋಳಿ ಮಾಂಸ
  • ಈರುಳ್ಳಿ-2
  • ಬೆಳ್ಳುಳ್ಳಿ-1
  • ತೆಂಗಿನ ಕಾಯಿ ತುರಿ-1 ಕಪ್
  • ಧನಿಯಾ 2 ಚಮಚ
  • ಒಣ ಮೆಣಸಿನಕಾಯಿ-12
  • ಅರಿಶಿಣ - ಅರ್ಧ ಚಮಚ
  • ಜೀರಿಗೆ- 1 ಚಮಚ
  • ಚಕ್ಕೆ, ಲವಂಗ, ಕರಿ ಮೆಣಸು ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ಅಡುಗೆ ಎಣ್ಣೆ- 4 ಟೀ ಸ್ಬೂನ್
  • ಶುಂಠಿ- 1 ಇಂಚು
  • ಕೊತ್ತಂಬರಿ ಸೊಪ್ಪು- ಸ್ವಲ್ಪ
ಮಾಡುವ ವಿಧಾನ
  • ಮೊದಲಿಗೆ ಪಾತ್ರೆ ಇಟ್ಟು ಎಣ್ಣೆ ಕಾಯಿಸಿ, ಅದಕ್ಕೆ ಸ್ವಲ್ಪ ಹೆಚ್ಚಿದ ಈರುಳ್ಳಿ ಹಾಕಿ ಕೆಂಪು ಬಣ್ಣ ಬರುವವರೆಗೂ ಫ್ರೈ ಮಾಡಿ.
  • ನಂತರ ತೊಳೆದು ಶುಚೀಕರಿಸಿದ ಕೋಳಿ ಮಾಂಸವನ್ನು ಹಾಕಿ, 1 ಚಮಚ ಅರಿಶಿನ ಮತ್ತು ಉಪ್ಪು ಹಾಕಿ ಬೇಯಿಸಿ.
  • ಮತ್ತೊಂದು ಬಾಣಲೆಯಲ್ಲಿ ಸಲ್ಪ ಎಣ್ಣೆ ಹಾಕಿ, ಈರುಳ್ಳಿ ಫ್ರೈ ಮಾಡಿ ಪಕ್ಕದಲ್ಲಿಡಿ, ನಂತರ ಅದೇ ಬಾಣಲೆಗೆ ಧನಿಯಾ, ಒಣ ಮೆಣಸಿನಕಾಯಿ, ಚಕ್ಕೆ, ಲವಂಗ, ಜೀರಿಗೆ, ಮೆಣಸು, ಶುಂಠಿ ಹಾಕಿ ಫ್ರೈ ಮಾಡಿ, ತಣ್ಣಾಗದ ನಂತರ ಫ್ರೈ ಮಾಡಿದ ಈರುಳ್ಳಿ ಜೊತೆ ನುಣ್ಣನೆ ರುಬ್ಬಿಕೊಳ್ಳಿ. 
  • ರುಬ್ಬಿದ ಮಿಶ್ರಣವನ್ನು ಹುರಿದ ಕೋಳಿ ಮಾಂಸಕ್ಕೆ ಹಾಕಿ ಚೆನ್ನಾಗಿ ಬೇಯಿಸಿ, ನಂತರ ತೆಂಗಿನ ಕಾಯಿ ರುಬ್ಬಿ, ಅದರ ಹಾಲನ್ನು ಸೋಸಿಕೊಳ್ಳಿ, ಹಾಲನ್ನು ಮಸಾಲೆ ಜೊತೆಗೆ ಸೇರಿಸಿ ಬೇಯಿಸಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮೇಲೆ ಉದುರಿಸಿದರೇ ರುಚಿಕರವಾದ ನಾಟಿ ಕೋಳಿ ಸಾರು ಮುದ್ದೆಯ ಜೊತೆ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com