ಬೇಸಿಗೆಗೆ ಉತ್ತಮವಾದುದು ಬಸಳೆ ಸೊಪ್ಪಿನ ತಂಬುಳಿ

ಬೇಸಿಗೆಗೆ ಬಸಳೆ ಸೊಪ್ಪಿನ ತಂಬುಳಿ ತುಂಬಾ ಆರೋಗ್ಯಕರವಾದದ್ದು, ದೇಹವನ್ನು ತಂಪಾಗಿಸಲು ಬಸಳೆ ಸೊಪ್ಪಿನ ತಂಬುಳಿ ತುಂಬಾ ಪ್ರಯೋಜನಕಾರಿ..
ಬಸಳೆ ಸೊಪ್ಪು
ಬಸಳೆ ಸೊಪ್ಪು
ಬೇಕಾಗುವ ಸಾಮಾಗ್ರಿಗಳು
  • ಬಸಳೆ ಸೊಪ್ಪು-10 ಎಲೆ
  • ಜೀರಿಗೆ- ಅರ್ಧ ಚಮಚ
  • ಶುಂಠಿ- ಚೂರು
  • ಮೊಸರು ಅಥವಾ ಮಜ್ಜಿಗೆ- 1/2 ಕಪ್
  • ತೆಂಗಿನ ತುರಿ-1/2 ಕಪ್
  • ಹಸಿ ಮೆಣಸಿನಕಾಯಿ-3
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಸ್ವಲ್ಪ
  • ಒಗ್ಗರಣೆಗೆ- ಸಾಸಿವೆ ಕರಿಬೇವು
ಮಾಡುವ ವಿಧಾನ
ಮೊದಲಿಗೆ ಬಸಳೆ ಸೊಪ್ಪನ್ನು ತೊಳೆದು ನಂತರ ಕತ್ತರಿಸಿಕೊಂಡು, 1 ಚಮಚ ಎಣ್ಣೆಯಲ್ಲಿ ಬಾಡಿಸಿಕೊಳ್ಳಿ
ನಂತರ ಬಸಳೆ ಸೊಪ್ಪು, ಜೀರಿಗೆ, ಶುಂಠಿ, ತೆಂಗಿನ ಕಾಯಿ, ಹಸಿ ಮೆಣಸಿನ ಕಾಯಿ ಸೇರಿಸಿ ರುಬ್ಬಿಕೊಳ್ಳಿ 
ಇದಾದ ನಂತರ ಸ್ವವ್ ಹಚ್ಚಿ ಪಾತ್ರೆ ಇಟ್ಟು , 2 ಚಮಚ ಎಣ್ಣೆ ಹಾಕಿ. ಕಾದ ಎಣ್ಣೆಗೆ, ಸಾಸಿವೆ ಕರಿಬೇವು ಹಾಗೂ ರುಬ್ಬಿದ ಮಿಶ್ರಣವನ್ನು ಹಾಕಿ  ಮಿಕ್ಸ್ ಮಾಡಿ
ಕೊನೆಯಲ್ಲಿ ಇದಕ್ಕೆ ಅರ್ಧ ಕಪ್ ಮಜ್ಜಿಗೆ ಅಥವಾ ಮೊಸರು ಸೇರಿಸಿದರೇ ಬಸಳೆ ಸೊಪ್ಪಿನ ತಂಬುಳಿ ಸವಿಯಲು ಸಿದ್ಧ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com