ಚಿಕನ್ ಲಿವರ್ ಫ್ರೈ

ಚಿಕನ್ ಲಿವರ್ ಫ್ರೈ ಮಾಡುವ ವಿಧಾನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿಕನ್ ಲಿವರ್ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು

  • ಚಿಕನ್ ಲಿವರ್ – 1/2 ಕೆಜಿ
  • ಈರುಳ್ಳಿ – 2 ಮಧ್ಯಮ ಗಾತ್ರ
  • ಒಗ್ಗರಣೆಗೆ ಎಣ್ಣೆ 
  • ಹಸಿ ಮೆಣಸಿನಕಾಯಿ-2
  • ಕಾಳು ಮೆಣಸು ಪುಡಿ – 2ಚಮಚ
  • ಅರಿಶಿಣ ಪುಡಿ – ಚಿಟಿಕೆ
  • ಕೆಂಪು ಮೆಣಸಿನ ಪುಡಿ – ಒಂದೂವರೆ ಚಮಚ
  • ಒಂದು ನಿಂಬೆ ಹಣ್ಣು 
  • ಧನಿಯಾ ಪುಡಿ 1 ಚಮಚ
  • ಶುಂಠಿ – ಬೆಳ್ಳುಳ್ಳಿ ಪೇಸ್ಟ್ 1 ಚಮಚ
  • ಉಪ್ಪು  ರುಚಿಗೆ ತಕ್ಕಷ್ಟು 
  • ಕೊತ್ತಂಬರಿ ಸೊಪ್ಪು 


ಚಿಕನ್ ಲಿವರ್ ಫ್ರೈ  ಮಾಡುವ ವಿಧಾನ

ಪ್ಯಾನ್‍ಗೆ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಅದಕ್ಕೆ ಉದ್ದುದ್ದಕ್ಕೆ ಕತ್ತರಿಸಿದ ಈರುಳ್ಳಿ ಹಾಗೂ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಗೋಲ್ಡನ್ ಬ್ರೌನ್ ಬರುವ ತನಕ ಫ್ರೈ ಮಾಡಿ.

ಅದಕ್ಕೆ ಶುಂಠಿ – ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವ ತನಕ ಕೈಯಾಡಿಸಿ.
ತೊಳೆದ ಚಿಕನ್ ಲಿವರ್ ಸೇರಿಸಿ. ನೀರು ಹಿಂಗುವವರೆಗೂ ಫ್ರೈ ಮಾಡಿ.

ನಂತರ ಅದಕ್ಕೆ ಅರಿಶಿಣ ಪುಡಿ, ಉಪ್ಪು, ಧನಿಯಾ ಪುಡಿ, ಖಾರದ ಪುಡಿ, ಕಾಳು ಮೆಣಸು ಸೇರಿದಂತೆ ಮೇಲೆ ಹೇಳಿದ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಮಿಕ್ಸ್ ಮಾಡಿ.

15 ನಿಮಿಷ ಕಡಿಮೆ ಉರಿಯಲ್ಲಿ ಲಿಡ್ ಮುಚ್ಚಿ ಬೇಯಲು ಬಿಡಿ.
ಮಿಶ್ರಣದೊಂದಿಗೆ ಲಿವರ್ ಬೆಂದ ಬಳಿಕ. ಅದಕ್ಕೆ ಕೊತ್ತಂಬರಿ ಸೊಪ್ಪು. ನಿಂಬೆ ಹಣ್ಣಿನ ರಸ ಸೇರಿಸಿ ಕೆಳಗಿಳಿಸಿದರೆ ರುಚಿರುಚಿಯಾದ ಚಿಕನ್ ಲಿವರ್ ಫ್ರೈ ಚಪಾತಿ, ರೋಟಿಯೊಂದಿಗೆ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com