ಎಗ್ ಮಸಾಲೆ

ರುಚಿಕರವಾದ ಎಗ್ ಮಸಾಲೆ ಮಾಡುವ ವಿಧಾನ...
ಎಗ್ ಮಸಾಲೆ
ಎಗ್ ಮಸಾಲೆ

ಬೇಕಾಗುವ ಪದಾರ್ಥಗಳು...

  • ಎಣ್ಣೆ- 5-6 ಚಮಚ
  • ಮೊಟ್ಟೆ- ಬೇಯಿಸಿದ್ದ 6
  • ಶುಂಠಿ, ಬೆಳ್ಳುಳ್ಳಿ ಪೇಸ್ಡ್- 1 ಚಮಚ
  • ಹಸಿಮೆಣಸಿನ ಕಾಯಿ-8ರಿಂದ 9 ಸಣ್ಣಗೆಹೆಚ್ಚಿದ್ದು
  • ಈರುಳ್ಳಿ- ಸಣ್ಣಗೆ ಉದ್ದಕ್ಕೆ ಹೆಚ್ಚಿಕೊಂಡಿದ್ದು 1 ಚಿಕ್ಕ ಬಟ್ಟಲು
  • ಕರಿಬೇವು- ಸ್ವಲ್ಪ
  • ಟೊಮೆಟೋ ಪೇಸ್ಟ್- 1 ಬಟ್ಟಲು
  • ಅರಿಶಿಣದ ಪುಡಿ- ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ಎಗ್ ಮಸಾಲೆಪುಡಿ- 1-2 ಚಮಚ
  • ತೆಂಗಿನ ಕಾಯಿ ಹಾಲು- 1 ಬಟ್ಟಲು


ಮಾಡುವ ವಿಧಾನ...

  • ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಕಾದ ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಕಾಯಿ, ಈರುಳ್ಳಿ, ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. 
  • ಬಳಿಕ ಟೊಮೆಟೋ ಪೇಸ್ಟ್, ಅರಿಶಿಣದಪುಡಿ, ಉಪ್ಪು, ಎಗ್ ಮಸಾಲೆ ಪುಡಿ, ತೆಂಗಿನ ಕಾಯಿ ಹಾಲು ಹಾಗೂ ಸ್ವಲ್ಪ ನೀರು ಚೆನ್ನಾಗಿ ಕುದಿಯಲು ಬಿಡಬೇಕು. ನಂತರ ಬೇಯಿಸಿಕೊಂಡ ಮೊಟ್ಟೆಯನ್ನ ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಎಗ್ ಮಸಾಲೆ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com