ಕುಂಬಳಕಾಯಿ ಹಲ್ವಾ

ಕುಂಬಳಕಾಯಿ ಹಲ್ವಾ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
ಕುಂಬಳಕಾಯಿ ಹಲ್ವಾ
ಕುಂಬಳಕಾಯಿ ಹಲ್ವಾ

ಬೇಕಾಗುವ ಸಾಮಗ್ರಿಗಳು

  • ಕುಂಬಳಕಾಯಿ-1 ದೊಡ್ಡ ಗಾತ್ರದ್ದು
  • ಸಕ್ಕರೆ-ಅರ್ಧ ಕೆಜಿ
  • ತುಪ್ಪ-ಕಾಲು ಕೆಜಿ
  • ಗೋಡಂಬಿ, ದ್ರಾಕ್ಷಿ ಸ್ವಲ್ಪ

ಮಾಡುವ ವಿಧಾನ

  • ಕುಂಬಳಕಾಯಿಯನ್ನು ಕತ್ತರಿಸಿ ಸಿಪ್ಪೆ ತೆಗೆದು ಬೀಜ ತೆಗೆದು ಸಣ್ಣ ಸಣ್ಣ ಹೋಳುಗಳಾಗಿ ಮಾಡಿ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
  • ಕಡಾಯಿ ಅಥವಾ ಬಾಣಲೆಯಲ್ಲಿ ಹಾಕಿ ಬೇಯಿಸಬೇಕು.
  • ಕುಂಬಳಕಾಯಿ ಚೆನ್ನಾಗಿ ಬೇಯುತ್ತಾ ಬಂದು ಅದರಲ್ಲಿರುವ ನೀರು ಆರುತ್ತಾ ಬಂದಾಗ ಸಕ್ಕರೆ ಹಾಕಿ ಸೌಟಿನಿಂದ ಚೆನ್ನಾಗಿ ಕೈಯಾಡಿಸುತ್ತಾ ಇರಬೇಕು.
  • ಕಂದು ಬಣ್ಣ ಬರುತ್ತಿದ್ದಂತೆ ತುಪ್ಪ ಹಾಕುತ್ತಾ ಕೈಯಾಡಿಸುತ್ತಾ ಇರಬೇಕು. ಪಾಕ ತಳ ಬಿಡುತ್ತಾ ಬಂದಂತೆ ಮತ್ತಷ್ಟು ತುಪ್ಪ ಹಾಕಬೇಕು.
  • ಪಾಕ ಚೆನ್ನಾಗಿ ಹದ ಬಂದು ತಳ ಬಿಟ್ಟಾಗ ಸ್ವಲ್ಪ ತುಪ್ಪ ಹಾಕಿ ಒಂದೆರಡು ನಿಮಿಷ ಕೈಯಾಡಿಸಿ ಗೋಡಂಬಿ, ದ್ರಾಕ್ಷಿ ತುಪ್ಪದಲ್ಲಿ ಹಾಕಿ ಹುರಿದು ಹಾಕಬೇಕು.
  • ನಂತರ ಇಳಿಸಿ ತುಪ್ಪ ಸವರಿದ ತಟ್ಟೆಗೆ ಹಾಕಿ ಅಲಂಕರಿಸಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com