ಎಗ್ ರಿಂಗ್ಸ್

ರುಚಿಯಾದ ಎಗ್ ರಿಂಗ್ಸ್ ಮಾಡುವ ವಿಧಾನ.
ಎಗ್ ರಿಂಗ್ಸ್
ಎಗ್ ರಿಂಗ್ಸ್

ಬೇಕಾಗುವ ಪದಾರ್ಥಗಳು:

  • ಬೆಣ್ಣೆ: 10 ಗ್ರಾಂ
  • ಉಪ್ಪು: 1 ಚಮಚ
  • ಮೆಣಸು: 1 ಚಮಚ
  • ಈರುಳ್ಳಿ: 1
  • ಮೊಟ್ಟೆ: 1
  • ಕ್ಯಾರೆಟ್: 1
  • ಬೇಸನ್: 1 ಚಮಚ
  • ಪಾರ್ಸ್ಲಿ

ಮಾಡುವ ವಿಧಾನ:

  • ಒಂದು ದೊಡ್ಡ ಈರುಳ್ಳಿಯನ್ನು ಸ್ಲೈಸ್ ಮಾಡಿ, ಹೊರಗಿನ ಎಳೆಯನ್ನು (ರಿಂಗ್ ಅನ್ನು) ಬೇರ್ಪಡಿಸಿ ಮತ್ತು ಉಳಿದ ಈರುಳ್ಳಿಯನ್ನು ಚೆನ್ನಾಗಿ ಕತ್ತರಿಸಿ. ಕ್ಯಾರೆಟ್ ತುರಿ ಮಾಡಿಕೊಳ್ಳಿ.
  • ಒಂದು ಬಟ್ಟಲಿನಲ್ಲಿ, 1 ಇಡೀ ಮೊಟ್ಟೆಯನ್ನು 1 ಚಮಚ ಬೇಸನ್‌ನೊಂದಿಗೆ ಚೆನ್ನಾಗಿ ಕದಡಿ. ನಂತರ ಉಪ್ಪು, ಮೆಣಸು, ಕತ್ತರಿಸಿದ ಈರುಳ್ಳಿ ಮತ್ತು ಕ್ಯಾರೆಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಬಿಸಿ ಬಾಣಲೆಗೆ ಬೆಣ್ಣೆಯನ್ನು ಹಾಕಿ ಮತ್ತು ಅದು ಕರಗಿದ ನಂತರ ಕತ್ತರಿಸಿದ ಈರುಳ್ಳಿ ರಿಂಗ್ ಗಳನ್ನು ಅದರ ಮೇಲೆ ಇರಿಸಿ.
  • ಮೊಟ್ಟೆಯ ಮಿಶ್ರಣವನ್ನು ಈರುಳ್ಳಿ ರಿಂಗ್ ಗಳ ಒಳಗೆ ಸುರಿಯಿರಿ ಮತ್ತು ಅದು ತುಸು ಕಂದು ಬಣ್ಣ ಬರುವವರೆಗೆ ಎರಡೂ ಬದಿಗಳನ್ನು ಫ್ರೈ ಮಾಡಿ.
<strong>ಈರುಳ್ಳಿಯ ಹೊರಗಿನ ಎಳೆಗಳು (ರಿಂಗ್ ಗಳು)</strong>
ಈರುಳ್ಳಿಯ ಹೊರಗಿನ ಎಳೆಗಳು (ರಿಂಗ್ ಗಳು)

ಈಗ ರುಚಿಯಾದ ಎಗ್ ರಿಂಗ್ಸ್ ತಿನ್ನಲು ಸಿದ್ಧವಾಗಿದೆ.

- ಸಿಸಿ ಜಾಕ್ವಿಲಿನ್, ಬೆಂಗಳೂರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com