ಫಿಶ್ ಪಕೋಡಾ
ಫಿಶ್ ಪಕೋಡಾ

ಫಿಶ್ ಪಕೋಡಾ

ರುಚಿಕರವಾದ ಫಿಶ್ ಪಕೋಡಾ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ಮೀನು ಮಾಂಸ – 250 ಗ್ರಾಂ (ಸಣ್ಣ ಮೂಳೆಗಳಿಲ್ಲದಿರುವುದು)
  • ಅಚ್ಚ ಖಾರದಪುಡಿ – 1 ಚಮಚ
  • ದನಿಯಾ ಪುಡಿ – 1 ಚಮಚ
  • ಅರಿಶಿನ ಪುಡಿ – ಅರ್ಧ ಚಮಚ
  • ಜೀರಿಗೆ ಪುಡಿ – ಅರ್ಧ ಚಮಚ
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
  • ಕಾರ್ನ್ ಫ್ಲೋರ್ – 1 ಚಮಚ
  • ಕಡಲೆ ಹಿಟ್ಟು – 2 ಚಮಚ
  • ಸಣ್ಣಗೆ ಹೆಚ್ಚಿದ ಕರಿಬೇವಿನ ಸೊಪ್ಪು – ಸ್ವಲ್ಪ
  • ಉಪ್ಪು– ರುಚಿಗೆ ತಕ್ಕಷ್ಟು
  • ಎಣ್ಣೆ – ಡೀಪ್‌ಫ್ರೈ ಮಾಡಲು ಬೇಕಾಗುವಷ್ಟು

ಮಾಡುವ ವಿಧಾನ...

  • ಮೊದಲಿಗೆ ಮೀನನ್ನು ಶುಚಿಗೊಳಿಸಿ, ಮೂಳೆಗಳನ್ನು ಬೇರ್ಪಡಿಸಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ.
  • ಒಂದು ಬೌಲ್‌ನಲ್ಲಿ ಎಣ್ಣೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿ.
  • ಅದಕ್ಕೆ ಮೀನಿನ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ, 20 ನಿಮಿಷ ಮ್ಯಾರಿನೇಟ್ ಆಗಲು ಬಿಡಿ.
  • ಈಗ ಎಣ್ಣೆ ಬಿಸಿ ಮಾಡಿ, ಮೀನಿನ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಕೈಯಲ್ಲಿ ತೆಗೆದುಕೊಂಡು ಪಕೋಡಾ ರೀತಿಯಲ್ಲಿ ಎಣ್ಣೆಯಲ್ಲಿ ಬಿಡಿ.
  • ಗೋಲ್ಡನ್ ಬ್ರೌನ್ ಬಣ್ಣ ಹಾಗೂ ಗರಿಗರಿಯಾಗುವವರೆಗೆ ಫ್ರೈ ಮಾಡಿಕೊಳ್ಳಿ.
  • ಇದೀಗ ಗರಿಗರಿಯಾದ ಹಾಗೂ ರುಚಿಕರವಾದ ಫಿಶ್ ಪಕೋಡಾ ಸವಿಯಲು ಸಿದ್ಧ.

Related Stories

No stories found.

Advertisement

X
Kannada Prabha
www.kannadaprabha.com