ಮಟನ್ ಪೆಪ್ಪರ್ ಫ್ರೈ

ರಂಜಾನ್ ಸ್ಪೆಷಲ್ ಮಟನ್ ಪೆಪ್ಪರ್ ಫ್ರೈ ಮಾಡುವ ವಿಧಾನ...
ಮಟನ್ ಪೆಪ್ಪರ್ ಫ್ರೈ
ಮಟನ್ ಪೆಪ್ಪರ್ ಫ್ರೈ
Updated on

ಬೇಕಾಗುವ ಪದಾರ್ಥಗಳು...

  • ಮಟನ್- ಒಂದು ಕೇಜಿ (ಚಿಕ್ಕ ತುಂಡುಗಳಾಗಿಸಿದ್ದು)

  • ಅಚ್ಚ ಖಾರದ ಮೆಣಸಿನಪುಡಿ- ಒಂದು ದೊಡ್ಡ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಒಂದೂವರೆ ಚಮಚ)

  • ಗರಂ ಮಸಾಲಾ ಪುಡಿ-ಒಂದು ದೊಡ್ಡ ಚಮಚ

  • ಕರಿಬೇವಿನ ಎಲೆಗಳು- ಸ್ವಲ್ಪ

  • ಅರಿಶಿನ ಪುಡಿ- ಸ್ವಲ್ಪ

  • ಹಸಿಮೆಣಸಿನ ಕಾಯಿ-ನಾಲ್ಕು (ಉದ್ದಕ್ಕೆ ಸೀಳಿದ್ದು)

  • ಕಾಳುಮೆಣಸಿನ ಪುಡಿ- ಮೂರು ದೊಡ್ಡಚಮಚ

  • ದನಿಯಾ ಪುಡಿ: ಒಂದು ದೊಡ್ಡ ಚಮಚ

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್: ಅರ್ಧ ದೊಡ್ಡ ಚಮಚ

  • ಎಣ್ಣೆ - ಸ್ವಲ್ಪ

  • ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಮಾಂಸದ ತುಂಡುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನೀರೆಲ್ಲಾ ಹೊರಹೋಗುವಂತೆ ಬಸಿಯಿರಿ. ಇದಕ್ಕೆ ಅರಿಶಿನದ ಪುಡಿ ಹಚ್ಚಿ ಬದಿಗಿಡಿ.

  • ಸುಮಾರು ಹದಿನೈದು ನಿಮಿಷದ ಬಳಿಕ ಪ್ರೆಶರ್ ಕುಕ್ಕರ್ ನಲ್ಲಿ ಕೊಂಚ ಎಣ್ಣೆ ಹಾಕಿ ಬಿಸಿಮಾಡಿ. ಬಿಸಿಯಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ದನಿಯಾ ಪುಡಿ, ಖಾರದ ಪುಡಿ, ಉಪ್ಪು ಹಾಕಿ ಚಿಕ್ಕ ಉರಿಯಲ್ಲಿ ತಿರುವುತ್ತಾ ಹುರಿಯಿರಿ.

  • ಕೊಂಚ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಮಾಂಸದ ತುಂಡುಗಳನ್ನು ಹಾಕಿ ಕೆಲಕಾಲ ಹುರಿದು ಬಳಿಕ ಮುಚ್ಚಳ ಮುಚ್ಚಿ ಅತಿ ಕಡಿಮೆ ಉರಿಯಲ್ಲಿ ಸುಮಾರು ಹದಿನೈದು ನಿಮಿಷ ಬೇಯಲು ಬಿಡಿ.

  • ಇನ್ನೊಂದು ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಕರಿಬೇವಿನ ಎಲೆ, ಹಸಿಮೆಣಸಿನಕಾಯಿ ಹಾಕಿ ಕಂದು ಬಣ್ಣವಾಗುವವರೆಗೆ ಹುರಿಯಿರಿ.

  • ಬಳಿಕ ಗರಂ ಮಸಾಲ ಪುಡಿ, ಕಾಳುಮೆಣಸಿನ ಪುಡಿ ಹಾಕಿ ಹುರಿಯಿರಿ. ನಂತರ ಪ್ರೆಶರ್ ಕುಕ್ಕರಿನಲ್ಲಿ ಬೇಯಿಸಿದ್ದ ಮಾಂಸದ ತುಂಡುಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

  • ಚಿಕ್ಕ ಉರಿಯಲ್ಲಿಯೇ ನಡು ನಡುವೆ ತಿರುವುತ್ತಾ ಮಾಂಸ ಬೇಯಲು ಬಿಡಿ. ಹತ್ತು ನಿಮಿಷದ ಬಳಿಕ ಉರಿಯನ್ನು ನಂದಿಸಿ. ಇದೀಗ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಮಟನ್ ಪೆಪ್ಪರ್ ಫ್ರೈ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com