
ಬೇಕಾಗುವ ಪದಾರ್ಥಗಳು...
ಚಿಕನ್ ಲಿವರ್-1/4 ಕೆ.ಜಿ
ಶುಂಠಿ - ಬೆಳ್ಳುಳ್ಳಿ- ಪೇಸ್ಟ್ 1 ಚಮಚ
ಹಸಿಮೆಣಸಿನ ಕಾಯಿ-4
ಕೊತ್ತಂಬರಿ ಸೊಪ್ಪು-ಸ್ವಲ್ಪ
ಪುದೀನ ಸೊಪ್ಪು-ಸ್ವಲ್ಪ
ಕರಿಬೇವು-1 ಕಡ್ಡಿ
ದನಿಯಾ ಪುಡಿ -1 ಚಮಚ
ಅಚ್ಚ ಖಾರದಪುಡಿ-2 ಚಮಚ
ಅರಿಶಿನ ಪುಡಿ-ಸ್ವಲ್ಪ
ಗರಂ ಮಸಾಲೆ-1 ಚಮಚ
ಈರುಳ್ಳಿ- 1
ಟೊಮೆಟೊ-1
ನಿಂಬೆಹಣ್ಣು-1
ಎಣ್ಣೆ-ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
ಚೆನ್ನಾಗಿ ತೊಳೆದ ಚಿಕನ್ ಲಿವರ್‌ಗೆ ಅರಿಸಿನ ಪುಡಿ ಖಾರದಪುಡಿ, ದನಿಯಾಪುಡಿ, ಗರಂ ಮಸಾಲೆ, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಉಪ್ಪು ಎಲ್ಲವನ್ನು ಸ್ವಲ್ಪ ಹಾಕಿ ಕಲಸಿ ಒಂದು ಗಂಟೆ ರೆಫ್ರಿಜರೇಟರ್‌ನಲ್ಲಿಡಿ.
ಇದೀಗ ಈರುಳ್ಳಿ, ಕೊತ್ತಂಬರಿ, ಹಸಿಮೆಣಸಿನಕಾಯಿ, ಟೊಮೆಟೊ, ಪುದೀನ ಕತ್ತರಿಸಿಟ್ಟುಕೊಳ್ಳಿ.
ಒಲೆಯ ಮೇಲೆ ಬಣಲೆ ಇಟ್ಟು ಎಣ್ಣೆ ಹಾಕಿ. ಕಾದ ನಂತರ ಕತ್ತರಿಸಿದ ಹಸಿಮೆಣಸಿನಕಾಯಿ, ಕರಿಬೇವು, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದ ಮೇಲೆ ಉಪ್ಪು, ಟೊಮೆಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪುದೀನ, ದನಿಯಾ ಪುಡಿ, ಖಾರದಪುಡಿ, ಗರಂ ಮಸಾಲೆ, ಲಿವರ್ ತುಂಡುಗಳನ್ನು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ ಬೆಂದ ನಂತರ ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಹಾಕಿ ಸ್ವಲ್ಪ ಬೇಯಿಸಿ ಕೆಳಗಿಳಿಸಿ. ಇದೀಗ ರುಚಿಕರವಾದ ಚಿಕನ್ ಲಿವರ್ ಫ್ರೈ ಸವಿಯಲು ಸಿದ್ಧ.
Advertisement