ಪೆಪ್ಪರ್ ಚಿಕನ್ ಕಬಾಬ್- Pepper chicken kebab Recipe in Kannada

ರುಚಿಕರವಾದ ಪೆಪ್ಪರ್ ಚಿಕನ್ ಕಬಾಬ್ ಮಾಡುವ ವಿಧಾನ...
ಪೆಪ್ಪರ್ ಚಿಕನ್ ಕಬಾಬ್
ಪೆಪ್ಪರ್ ಚಿಕನ್ ಕಬಾಬ್
Updated on

ಬೇಕಾಗುವ ಪದಾರ್ಥಗಳು...

  • ಚಿಕನ್- 1 ಕೆಜಿ

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ

  • ಹಸಿಮೆಣಸಿನ ಕಾಯಿ ಪೇಸ್ಟ್- ಒಂದು ಸಣ್ಣ ಬಟ್ಟಲು (5 ಮೆಣಸಿನಕಾಯಿ)

  • ನಿಂಬೆಹಣ್ಣು- 1

  • ಉಪ್ಪು-ರುಚಿಗೆ ತಕ್ಕಷ್ಟು

  • ಮೊಟ್ಟೆ- 1

  • ಅರಿಶಿಣದ ಪುಡಿ - ಅರ್ಧ ಚಮಚ

  • ಕಾಳು ಮೆಣಸು- 3 ಚಮಚ (ಕುಟ್ಟಿ ಪುಡಿ ಮಾಡಿದ್ದು)

  • ದನಿಯಾ ಪುಡಿ- 1 ಚಮಚ

  • ಗರಂ ಮಸಾಲೆ ಪುಡಿ- 1 ಚಮಚ

  • ಕರಿಬೇವು- ಸ್ವಲ್ಪ

  • ಕೊತ್ತಂಬರಿ ಹಾಗೂ ಪುದೀನಾ- ಸ್ವಲ್ಪ

  • ಕಸ್ತೂರಿ ಮೇಥಿ- 1 ಚಮಚ

  • ಬೆಳ್ಳುಳ್ಳಿ- ಜಜ್ಜಿದ್ದು- 10 ಎಸಳು

  • ಕಾರ್ನ್ ಫ್ಲೋರ್- 6-7 ಚಮಚ

  • ಮೈದಾ ಹಿಟ್ಟು- 3 ಚಮಚ

  • ಸೋಯಾ ಸಾಸ್- 1 ಚಮಚ

  • ಎಣ್ಣೆ-ಕರಿಯಲು

ಮಾಡುವ ವಿಧಾನ...

  • ಮೊದಲಿಗೆ ಚಿಕನ್ ನ್ನು ಚೆನ್ನಾಗಿ ತೊಳೆದು, ನೀರಿಲ್ಲದೆ ಸೋರಿಸಿಟ್ಟುಕೊಳ್ಳಿ. ಒಂದು ಪಾತ್ರೆಗೆ ಚಿಕನ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಕಾಯಿ ಪೇಸ್ಟ್, ನಿಂಬೆಹಣ್ಣಿನ ರಸ ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದು ಅರ್ಧ ಗಂಟೆಗಳ ನೆನೆಯಲು ಬಿಡಿ.

  • ನಂತರ ಮತ್ತೊಂದು ಪಾತ್ರೆಗೆ ಮೊಟ್ಟೆ, ಅರಿಶಿಣದ ಪುಡಿ, ಕಾಳು ಮೆಣಸಿನ ಪುಡಿ, ದನಿಯಾ ಪುಡಿ, ಗರಂ ಮಸಾಲೆ ಪುಡಿ, ಸಣ್ಣಗೆ ಕತ್ತರಿಸಿಕೊಂಡ ಕರಿಬೇವು, ಕೊತ್ತಂಬರಿ, ಪುದೀನಾ, ಕಸ್ತೂರಿ ಮೇಥಿ, ಬೆಳ್ಳುಳ್ಳಿ, ಕಾರ್ನ್ ಫ್ಲೋರ್ (ಜೋಳದ ಹಿಟ್ಟು), ಮೈದಾ ಹಿಟ್ಟು, ಸೋಯಾ ಸಾಸ್ ಹಾಗೂ ಸ್ವಲ್ವ ಉಪ್ಪು ( ಈ ಮೊದಲೇ ಹಾಕಿರುವುದರಿಂದ ನೋಡಿಕೊಂಡು ಹಾಕಬೇಕು) ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಅಗತ್ಯವೆನಿಸಿದರೆ, ಕಾರ್ನ್ ಫ್ಲೋರ್ ಹಾಗೂ ಕಾಳುಮೆಣಿಸಿನ ಪುಡಿಯನ್ನು ಹಾಕಿಕೊಳ್ಳಬಹುದು. ಇದೀಗ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. 1 ಗಂಟೆ ನೆನೆಯಲು ಬಿಡಿ.

  • ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಕಾದ ನಂತರ ಮಸಾಲೆ ಮಿಶ್ರಿತ ಚಿಕನ್ ನ್ನು ಒಂದೊಂದೇ ಹಾಕಿ 4-5 ನಿಮಿಷ ಬೇಯಿಸಿ, ತೆಗೆಯಿರಿ. 10 ನಿಮಿಷದ ಬಳಿ ಮತ್ತೆ ಕಾದ ಎಣ್ಣೆಗೆ ಹಾಕಿ ಡೀಪ್ ಫ್ರೈ ಮಾಡಿದರೆ ರುಚಿಕರವಾದ ಪೆಪ್ಪರ್ ಚಿಕನ್ ಕಬಾಬ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com