ಮೀನು ಖಾದ್ಯಕ್ಕೆ ಹೊಸ ಟೇಸ್ಟ್ ಬೇಕಾ? ಒಮ್ಮೆ ಮಾಡಿ ನೋಡಿ ತಂದೂರಿ ಪಾಂಫ್ರೆಟ್..!

ಮೀನು ಖಾದ್ಯಗಳಲ್ಲಿ ವಿಭಿನ್ನ ರುಚಿ ಸವಿಯಲು ಬಯಸುವವರು ತಂದೂರಿ ಪಾಂಫ್ರೆಟ್‌ನ್ನು ಖಂಡಿತ ಪ್ರಯತ್ನಿಸಬಹುದು. ಹೆಚ್ಚು ಸಮಯ ಅಥವಾ ಕಷ್ಟದ ತಯಾರಿ ಅಗತ್ಯವಿಲ್ಲದೆ ಮನೆಯಲ್ಲೇ ಸರಳವಾಗಿ ತಯಾರಿಸಬಹುದಾದ ಈ ಖಾದ್ಯವು ವಾರಾಂತ್ಯದ ಊಟ, ವಿಶೇಷ ಸಂದರ್ಭ ಅಥವಾ ಸಂಜೆ ತಿಂಡಿಗೆ ಅತ್ಯುತ್ತಮ ಆಯ್ಕೆಯಾಗಿದೆ.
Tandoori Pomfret
ತಂದೂರಿ ಪಾಂಫ್ರೆಟ್
Updated on: 

ಮೀನು ಖಾದ್ಯಗಳಲ್ಲಿ ವಿಭಿನ್ನ ರುಚಿ ಸವಿಯಲು ಬಯಸುವವರು ತಂದೂರಿ ಪಾಂಫ್ರೆಟ್‌ನ್ನು ಖಂಡಿತ ಪ್ರಯತ್ನಿಸಬಹುದು. ಹೆಚ್ಚು ಸಮಯ ಅಥವಾ ಕಷ್ಟದ ತಯಾರಿ ಅಗತ್ಯವಿಲ್ಲದೆ ಮನೆಯಲ್ಲೇ ಸರಳವಾಗಿ ತಯಾರಿಸಬಹುದಾದ ಈ ಖಾದ್ಯವು ವಾರಾಂತ್ಯದ ಊಟ, ವಿಶೇಷ ಸಂದರ್ಭ ಅಥವಾ ಸಂಜೆ ತಿಂಡಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಬೇಕಾಗುವ ಪದಾರ್ಥಗಳು...

  • ಪಾಂಫ್ರೆಟ್ ಮೀನು – 2 ಮಧ್ಯಮ ಗಾತ್ರದವು

  • ದಪ್ಪ ಮೊಸರು – 3 ಚಮಚ

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ

  • ಖಾರದ ಪುಡಿ – 1 ಚಮಚ

  • ಕಾಶ್ಮೀರಿ ಮೆಣಸಿನ ಪುಡಿ – 1 ಚಮಚ

  • ಅರಿಶಿನ ಪುಡಿ – ½ ಚಮಚ

  • ಧನಿಯಾ ಪುಡಿ – 1 ಚಮಚ

  • ಜೀರಿಗೆ ಪುಡಿ – ½ ಚಮಚ

  • ಗರಂ ಮಸಾಲೆ – ½ ಚಮಚ

  • ನಿಂಬೆಹಣ್ಣಿನ ರಸ – 1 ಚಮಚ

  • ಕಡಲೆ ಹಿಟ್ಟು – 1 ಚಮಚ

  • ಎಣ್ಣೆ – 1–2 ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ಕಸೂರಿ ಮೆಂತೆ – ½ ಚಮಚ

  • ಚಾಟ್ ಮಸಾಲೆ – ಸ್ವಲ್ಪ

  • ಬೆಣ್ಣೆ – 1 ಚಮಚ

Tandoori Pomfret
ಮೀನು ಪ್ರಿಯರ ಫೇವರಿಟ್ ಫಿಶ್ ತವಾ ಫ್ರೈ: ಈ ರೆಸಿಪಿ ಒಮ್ಮೆ ಟ್ರೈ ಮಾಡಿ..!

ಮಾಡುವ ವಿಧಾನ...

  • ಮೊದಲು ಪಾಂಫ್ರೆಟ್ ಮೀನುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ಮೀನಿನ ಎರಡೂ ಬದಿಗಳಲ್ಲಿ ಚಾಕುವಿನಿಂದ ಲಘುವಾಗಿ ಗೆರೆಗಳನ್ನು ಹಾಕಿ. ಇದರಿಂದ ಮಸಾಲೆ ಒಳಗೆ ಚೆನ್ನಾಗಿ ಸೇರಿಕೊಳ್ಳುತ್ತದೆ.

  • ಒಂದು ಪಾತ್ರೆಯಲ್ಲಿ ದಪ್ಪ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಕಾಶ್ಮೀರಿ ಮೆಣಸಿನ ಪುಡಿ, ಅರಿಶಿನ, ದನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ನಿಂಬೆಹಣ್ಣಿನ ರಸ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

  • ಇದಕ್ಕೆ ಕಡಲೆ ಹಿಟ್ಟು, ಕಸೂರಿ ಮೇಥಿ ಮತ್ತು ಒಂದು ಟೇಬಲ್ ಸ್ಪೂನ್ ಎಣ್ಣೆ ಸೇರಿಸಿ ಗಟ್ಟಿಯಾದ ಮಸಾಲೆ ತಯಾರಿಸಿಕೊಳ್ಳಿ.

  • ತಯಾರಿಸಿದ ಮಸಾಲೆಯನ್ನು ಮೀನಿನ ಎರಡೂ ಬದಿಗಳಿಗೆ ಹಾಗೂ ಗೆರೆಗಳ ಒಳಗೂ ಚೆನ್ನಾಗಿ ಹಚ್ಚಿ. ಕನಿಷ್ಠ 30 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಲು ಬಿಡಿ. ಹೆಚ್ಚು ರುಚಿ ಬೇಕಿದ್ದರೆ 2 ಗಂಟೆಗಳವರೆಗೆ ಫ್ರಿಜ್‌ನಲ್ಲಿ ಇಡಬಹುದು.

  • ನಂತರ ತವಾ ಬಿಸಿ ಮಾಡಿ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಸವರಿ. ಮ್ಯಾರಿನೇಟ್ ಮಾಡಿದ ಪಾಂಫ್ರೆಟ್‌ಗಳನ್ನು ತವಾ ಮೇಲೆ ಇಟ್ಟು ಮಧ್ಯಮ ಉರಿಯಲ್ಲಿ ಬೇಯಿಸಿ. ಒಂದು ಬದಿ ಹೊಂಬಣ್ಣಕ್ಕೆ ತಿರುಗಿದ ನಂತರ ನಿಧಾನವಾಗಿ ತಿರುಗಿಸಿ ಮತ್ತೊಂದು ಬದಿಯನ್ನೂ ಬೇಯಿಸಿ.

  • ಮೀನು ಚೆನ್ನಾಗಿ ಬೆಂದು ಹೊರಭಾಗದಲ್ಲಿ ಮಸಾಲೆ ಗರಿಗರಿಯಾಗುವವರೆಗೆ ತವಾ ಮೇಲೆ ಹುರಿಯಿರಿ. ಬೇಕಿದ್ದರೆ ಕೊನೆಯಲ್ಲಿ ಸ್ವಲ್ಪ ಬೆಣ್ಣೆ ಸವರಿ 1–2 ನಿಮಿಷ ಹುರಿದರೆ ತಂದುರಿ ಶೈಲಿಯ ಪರಿಮಳ ಬರುತ್ತದೆ.

  • ಬಿಸಿ ಬಿಸಿಯಾದ ತಂದೂರಿ ಪಾಂಫ್ರೆಟ್ ಅನ್ನು ಈರುಳ್ಳಿ ಉಂಗುರಗಳು, ನಿಂಬೆಹಣ್ಣಿನ ತುಂಡುಗಳು ಮತ್ತು ಪುದೀನಾ-ಕೊತ್ತಂಬರಿ ಚಟ್ನಿಯೊಂದಿಗೆ ಸವಿಯಿರಿ.

ಟಿಪ್ಸ್...

  • ಮೀನನ್ನು ಮ್ಯಾರಿನೇಟ್ ಮಾಡುವ ಮೊದಲು ಸ್ವಲ್ಪ ಉಪ್ಪು ಮತ್ತು ನಿಂಬೆಹಣ್ಣಿನ ರಸ ಹಚ್ಚಿ 10 ನಿಮಿಷ ಇಟ್ಟರೆ ರುಚಿ ಚೆನ್ನಾಗಿ ಒಳಗೆ ಸೇರುತ್ತದೆ.

  • ತವಾ ಮೇಲೆ ಮೀನು ಬೇಯಿಸುವಾಗ ಹೆಚ್ಚಿನ ಉರಿ ಬಳಸಬೇಡಿ; ಮಧ್ಯಮ ಉರಿಯಲ್ಲಿ ನಿಧಾನವಾಗಿ ಬೇಯಿಸಿದರೆ ಮೀನು ಒಣಗದೆ ಮೃದುವಾಗಿ ಉಳಿಯುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com