ಗರಿಗರಿಯಾದ ಸಿಗಡಿ ಫ್ರೈ: ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ...

ಸಿಗಡಿ ಪ್ರಿಯರಿಗೆ ಸಿಗಡಿ ಫ್ರೈ ಎಂದರೆ ಬಾಯಲ್ಲಿ ನೀರೂರಿಸುವ ಖಾದ್ಯ. ಖಾರ, ಮಸಾಲೆ ಹಾಗೂ ಈರುಳ್ಳಿಯ ಸುವಾಸನೆಯೊಂದಿಗೆ ಗರಿಗರಿಯಾಗಿ ತಯಾರಿಸುವ ಸಿಗಡಿ ಫ್ರೈ ಅನ್ನದ ಜೊತೆ ಮಾತ್ರವಲ್ಲದೆ ರೊಟ್ಟಿ, ಚಪಾತಿಯೊಂದಿಗೂ ಸವಿಯಲು ರುಚಿಕರವಾಗಿರುತ್ತದೆ.
Shrimp fry
ಸಿಗಡಿ ಫ್ರೈ
Updated on

ಸಿಗಡಿ ಪ್ರಿಯರಿಗೆ ಸಿಗಡಿ ಫ್ರೈ ಎಂದರೆ ಬಾಯಲ್ಲಿ ನೀರೂರಿಸುವ ಖಾದ್ಯ. ಖಾರ, ಮಸಾಲೆ ಹಾಗೂ ಈರುಳ್ಳಿಯ ಸುವಾಸನೆಯೊಂದಿಗೆ ಗರಿಗರಿಯಾಗಿ ತಯಾರಿಸುವ ಸಿಗಡಿ ಫ್ರೈ ಅನ್ನದ ಜೊತೆ ಮಾತ್ರವಲ್ಲದೆ ರೊಟ್ಟಿ, ಚಪಾತಿಯೊಂದಿಗೂ ಸವಿಯಲು ರುಚಿಕರವಾಗಿರುತ್ತದೆ. ಮನೆಯಲ್ಲೇ ಕಡಿಮೆ ಸಮಯದಲ್ಲಿ ಸರಳವಾಗಿ ತಯಾರಿಸಬಹುದಾದ ಈ ಸಿಗಡಿ ಫ್ರೈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು...

  • ಸಿಗಡಿ – 500 ಗ್ರಾಂ

  • ಈರುಳ್ಳಿ – 2

  • ಹಸಿಮೆಣಸಿನಕಾಯಿ – 2

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ

  • ಖಾರದ ಪುಡಿ – 1½ ಚಮಚ

  • ಅರಿಶಿಣ – ½ ಚಮಚ

  • ದನಿಯಾ ಪುಡಿ – 1 ಚಮಚ

  • ಜೀರಿಗೆ ಪುಡಿ – ½ ಚಮಚ

  • ಗರಂ ಮಸಾಲೆ – ½ ಚಮಚ

  • ನಿಂಬೆ ರಸ – 1 ಚಮಚ

  • ಕರಿಬೇವು – ಸ್ವಲ್ಪ

  • ಕೊತ್ತಂಬರಿ ಸೊಪ್ಪು – ಸ್ವಲ್ಪ

  • ಉಪ್ಪು – ರುಚಿಗೆ ತಕ್ಕಷ್ಟು

  • ಎಣ್ಣೆ – 2–3 ಚಮಚ

Shrimp fry
ಹೆಸರು ಬೇಳೆ ಇದೆಯಾ? ಈ ರುಚಿಕರ ಪಕೋಡಾ ಮಾಡಿ, ಮನೆಯವರೆಲ್ಲಾ ಫಿದಾ ಆಗೋದು ಗ್ಯಾರಂಟಿ!

ಮಾಡುವ ವಿಧಾನ...

  • ಮೊದಲಿಗೆ ಸಿಗಡಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ ನೀರಿನಲ್ಲಿ ತೊಳೆದು, ನೀರು ಸಂಪೂರ್ಣವಾಗಿ ಬಸಿದುಕೊಳ್ಳಿ. ಸಿಗಡಿಗೆ ಅರಿಶಿಣ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಇದನ್ನು ಸುಮಾರು 15 ನಿಮಿಷಗಳ ಕಾಲ ನೆನೆಯಲು ಬಿಡಿ.

  • ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ.

  • ನಂತರ ಮಸಾಲೆ ಹಚ್ಚಿದ ಸಿಗಡಿಯನ್ನು ಬಾಣಲೆಗೆ ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಸಿಗಡಿಯಿಂದ ನೀರು ಹೊರಬಂದರೆ ಅದು ಆವಿಯಾಗುವವರೆಗೆ ಹುರಿಯಿರಿ. ಬಳಿಕ ಗರಂ ಮಸಾಲೆ ಪುಡಿ ಸೇರಿಸಿ ಚೆನ್ನಾಗಿ ಕಲಸಿ.

  • ಸಿಗಡಿ ಚೆನ್ನಾಗಿ ಬೆಂದು ಮಸಾಲೆ ಸಿಗಡಿಗೆ ಅಂಟಿಕೊಂಡು ಸ್ವಲ್ಪ ಗರಿಗರಿಯಾಗುವವರೆಗೆ 5–7 ನಿಮಿಷಗಳ ಕಾಲ ಹುರಿಯಿರಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನಿಂಬೆ ರಸ ಹಾಕಿ ಕಲಸಿ. ಇದೀಗ ರುಚಿಯಾದ ಸಿಗಡಿ ಫ್ರೈ ಸವಿಯಲು ಸಿದ್ಧ.

ಟಿಪ್ಸ್...

ಸಿಗಡಿಯನ್ನು ಹೆಚ್ಚಿನ ಉರಿಯಲ್ಲಿ ಬೇಯಿಸಿದರೆ ಗಟ್ಟಿಯಾಗಬಹುದು. ಆದ್ದರಿಂದ ಮಧ್ಯಮ ಉರಿಯಲ್ಲಿ ಬೇಯಿಸಿ, ಸಿಗಡಿ ಬಣ್ಣ ಬದಲಾಗಿ ಚೆನ್ನಾಗಿ ಬೇಯುತ್ತಿದ್ದಂತೆ ಉರಿಯನ್ನು ಆರಿಸುವುದು ಉತ್ತಮ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com