ಗೆಳೆತನದ ಬಗ್ಗೆ - ಖಲೀಲ್ ಗಿಬ್ರಾನ್ ಪದ್ಯ

ನಿನ್ನ ಅಗತ್ಯಗಳಿಗೆ ಉತ್ತರ ನಿನ್ನ ಗೆಳೆಯನೀನು ಪ್ರೀತಿಯಿಂದ ಬಿತ್ತುವ ಮತ್ತು ದೇವರಿಗೆ ಧನ್ಯವಾದ ಹೇಳಿ ಕೊಯ್ಲು ಕೊಯ್ಯುವ ನೆಲ ಅವನು
ಗೆಳೆತನದ ಬಗ್ಗೆ - ಖಲೀಲ್ ಗಿಬ್ರಾನ್
ಗೆಳೆತನದ ಬಗ್ಗೆ - ಖಲೀಲ್ ಗಿಬ್ರಾನ್
Updated on

ನಿನ್ನ ಅಗತ್ಯಗಳಿಗೆ ಉತ್ತರ ನಿನ್ನ ಗೆಳೆಯ
ನೀನು ಪ್ರೀತಿಯಿಂದ ಬಿತ್ತುವ ಮತ್ತು ದೇವರಿಗೆ ಧನ್ಯವಾದ ಹೇಳಿ ಕೊಯ್ಲು ಕೊಯ್ಯುವ ನೆಲ ಅವನು
ಅವನು ನಿನ್ನ ಆವಾಸ ಮತ್ತು ಬಿಸಿಕಾಯುವ ಬದಿ  
ನೀನು ಅವನ ಬಳಿ ಹಸಿದು ಬರುವೆ, ಮತ್ತು ಶಾಂತಿಗಾಗಿ ಅವನನ್ನು ಅರಸುವೆ


ಯಾವಾಗ ನಿನ್ನ ಗೆಳೆಯ ನಿನ್ನ ಬಳಿ ಮನಬಿಚ್ಚಿ ಮಾತಾನಾಡುತ್ತಾನೋ ನಿನ್ನ ಮನಸ್ಸಿನಲ್ಲಿ 'ಹಾಗಲ್ಲ'ದ ಭಯವಿರುವುದಿಲ್ಲ ಅಥವಾ 'ಹೌದು'ನ್ನು ನೀನು ತಡೆದಿಡುವುದಿಲ್ಲ
ಹಾಗೂ ಅವನು ಮೌನವಾಗಿದ್ದಾಗ ನಿನ್ನ ಎದೆ ಅವನ ಎದೆಯನ್ನು ಕೇಳಿಸಿಕೊಳ್ಳುವದ ನಿಲ್ಲಿಸುವುದೇ ಇಲ್ಲ
ಪದಗಳೇ ಇಲ್ಲವಾದಾಗ, ಗೆಳೆತನದಲ್ಲಿ, ಎಲ್ಲ ಚಿಂತನೆಗಳು, ಎಲ್ಲ ಆಸೆಗಳು, ಎಲ್ಲ
ನಿರೀಕ್ಷೆಗಳು ಹುಟ್ಟುತ್ತವೆ ಮತ್ತು ಭಾಗಿಯಾಗುತ್ತವೆ, ಹೊಗಳಿಕೆಯಿಲ್ಲದ ಆನಂದದ ಜೊತೆಗೆ.
ನಿನ್ನ ಗೆಳೆಯನಿಂದ ದೂರಾದಾಗ, ನೀನು ಪರಿತಪಿಸುವುದಿಲ್ಲ;
ಏಕೆಂದರೆ ಅವನ ಅನುಪಸ್ಥಿತಿಯಲ್ಲೇ ಅವನಲ್ಲೇನು ನೀನು ತೀವ್ರವಾಗಿ ಪ್ರೀತಿಸುವೆ ಎಂಬುದು ಬಹುಶಃ ನಿನಗೆ ಸ್ಪಷ್ಟವಾಗಿರುತ್ತದೆ, ಬಳ್ಳಿಗೆ ಸಮತಟ್ಟಿನಿಂದ ಬೆಟ್ಟ ಸ್ಪಷ್ಟವಾಗಿರುವ ಹಾಗೆ
ಮತ್ತು ಗೆಳೆತನಕ್ಕೆ ಯಾವುದೇ ಉದ್ದೇಶವಿರದೆ ಇರಲಿ ಆಳವಾದ ಚೈತನ್ಯ ಉಳಿಸು.
ತನ್ನದೇ ನಿಗೂಢತೆಯನ್ನಷ್ಟೇ ಬಯಲಿಗೆಳೆಯುವ ಪ್ರೀತಿ ಪ್ರೀತಿಯಲ್ಲ ಅದು ಬಲೆ
ತೊಡೆದು ಹಾಕು: ಉಪಯೋಗವಿಲ್ಲದ್ದೇ ಸಿಕ್ಕಿಬೀಳುವುದು

ನಿನ್ನ ಅತ್ಯುತ್ತಮವಾದುದು ನಿನ್ನ ಗೆಳೆಯನಿಗಿರಲಿ
ನಿನ್ನ ಜೀವನದ ಹಿನ್ನಡೆಯನ್ನು ಅವನು ತಿಳಿಯಬೇಕೆಂದರೆ, ಅವನು ಅದರ ಪ್ರವಾಹವನ್ನು ತಿಳಿದಿರಲಿ
ಸಾಯುವ ಕ್ಷಣದಲ್ಲಷ್ಟೇ ನೀನು ಅವನನ್ನು ಅರಸುವುದಾದರೆ ಅವನು ನಿನ್ನ ಗೆಳೆಯನಾಗಿರುವುದಾದರು ಏಕೆ?
ಯಾವಾಗಲು ಜೀವಂತ ಕ್ಷಣಗಳಲ್ಲಿ ಅವನನ್ನು ಅರಸು
ನಿನ್ನ ಅಗತ್ಯಗಳನ್ನು ತುಂಬುವುದು ಅವನಿಗಿರಲಿ ಬಿಡು, ಆದರೆ ನಿನ್ನ ಖಾಲಿತನವನ್ನಲ್ಲ
ಮತ್ತು ಗೆಳೆತನದ ಸಿಹಿತನದಲ್ಲಿ ನಗುವಿರಲಿ, ಮತ್ತು ಸಂತಸದ ಸಹಪಾಲು
ಸಣ್ಣ ಸಂಗತಿಗಳ ಇಬ್ಬನಿಗಳಲ್ಲಿ ಹೃದಯ ಬೆಳಗನ್ನು ಕಂಡುಕೊಂಡು ಉಲ್ಲಸಿತವಾಗಿರುತ್ತದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com