ಆಧಾರ್ ಕಾರ್ಡುದಾರರಿಗೆ ಹೊಸ ಸೇವೆ ಆರಂಭಿಸಿದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ
ಆಧಾರ್ ಕಾರ್ಡುದಾರರಿಗೆ ಭಾರತೀಯ ವಿಶಿಷ್ಟ ಗುರುತು ಸಂಖ್ಯೆಗಳ ಪ್ರಾಧಿಕಾರ (ಯುಐಎಐ) “ಆಸ್ಕ್ ಆಧಾರ್” ಹೆಸರಿನಲ್ಲಿ ಮತ್ತೊಂದು ಹೊಸ ಸೇವೆಯನ್ನು ಪ್ರಾರಂಭಿಸಿದೆ.
Published: 27th December 2019 07:19 PM | Last Updated: 27th December 2019 07:19 PM | A+A A-

ಆಧಾರ್
ನವದೆಹಲಿ: ಆಧಾರ್ ಕಾರ್ಡುದಾರರಿಗೆ ಭಾರತೀಯ ವಿಶಿಷ್ಟ ಗುರುತು ಸಂಖ್ಯೆಗಳ ಪ್ರಾಧಿಕಾರ (ಯುಐಎಐ) “ಆಸ್ಕ್ ಆಧಾರ್” ಹೆಸರಿನಲ್ಲಿ ಮತ್ತೊಂದು ಹೊಸ ಸೇವೆಯನ್ನು ಪ್ರಾರಂಭಿಸಿದೆ.
ಯುಐಡಿಎಐ ಛಾಟ್‌ಬಾಟ್ ಸೇವೆ ಅಂದರೆ, ಆಧಾರ್ ಗೆ ಸಂಬಂಧಿಸಿದ ಸಂದೇಹಗಳು, ಸಮಸ್ಯೆಗಳಿಗೆ ಛಾಟ್ ಬಾಟ್ ಸೇವೆಯನ್ನು ಬಳಸಿಕೊಂಡು ಜನರು ಆಧಾರ್ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು
ನೀವು ಯುಐಡಿಎಐ ಅಧಿಕೃತ ವೆಬ್‌ಸೈಟ್ https://uidai.gov.in/ ಅನ್ನು ತೆರೆದರೆ, ಛಾಟ್‌ಬಾಟ್ ಐಕಾನ್ ಕಾಣಿಸಿಕೊಳ್ಳುತ್ತದೆ. ಆ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ ಸಮಸ್ಯೆಯನ್ನು ವಿವರಿಸಬಹುದು. ಆಧಾರ್ ನವೀಕರಣ ಮಾಹಿತಿ, ಆಧಾರ್ ಸ್ಥಿತಿ, ಡೌನ್‌ಲೋಡ್ ಇ ಆಧಾರ್, ಆಧಾರ್ ದಾಖಲಾತಿ ಈ ರೀತಿ ಆಧಾರ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು
ಪ್ರಸ್ತುತ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಛಾಟ್ ಬಾಟ್ ಸೇವೆ ಲಭ್ಯವಿದೆ. ಆಧಾರ್ ಗೆ ಸಂಬಂಧಿಸಿದ ವೀಡಿಯೊಗಳು. ಸಂಬಂಧಿತ ವಿಷಯಗಳನ್ನು ಇದೇ ವಿಂಡೋದಲ್ಲಿ ವೀಕ್ಷಿಸಬಹುದು.
ಇದರೊಂದಿಗೆ ಆಧಾರ್ ಸಂಬಂಧಿಸಿದ ಯುಐಡಿಎಐ ಮತ್ತೊಂದು ಮೈಲಿಗಲ್ಲು ತಲುಪಿದೆ. ಈವರೆಗೆ ೧೨೫ ಕೋಟಿ ಜನರು ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂದು ಅಧಿಕೃತವಾಗಿ ಯುಐಡಿಎಐ ಪ್ರಕಟಿಸಿದೆ
ಆಧಾರ್ ಕಾರ್ಡ್ ಅನ್ನು ಪ್ರಾಥಮಿಕವಾಗಿ ಗುರುತಿನ ಚೀಟಿಯಾಗಿ ಹೆಚ್ಚು ಬಳಸಲಾಗುತ್ತಿದೆ ಎಂದು ಸರ್ಕಾರ ಬಹಿರಂಗಪಡಿಸಿದೆ. ಆಧಾರ್ ಸೇವೆ ಪ್ರಾರಂಭವಾದಾಗಿನಿಂದ ೩೭ ಶತಕೋಟಿ ಬಾರಿ ಟೆಸ್ಟ್ ಅಥೆಂಟಿಕೇಷನ್ ನಡೆಸಲಾಗಿದೆ ಎಂದು ಅಂದಾಜಿಸಲಾಗಿದೆ
ಅಷ್ಟೇ ಅಲ್ಲ ಪ್ರತಿ ದಿನ ಆಧಾರ್ ಅಥೆಂಟಿಕೇಷನ್ ಗಾಗಿ ಮೂರು ಕೋಟಿ ಕೋರಿಕೆಗಳು ಯುಐಡಿಎಐಗೆ ಬರುತ್ತಿವೆ. ಇದುವರೆಗೆ ೩೩೧ ಕೋಟಿ ಆಧಾರ್ ನವೀಕರಣ ನಡೆದಿವೆ. ಆಧಾರ್ ನವೀಕರಣಕ್ಕಾಗಿ ಪ್ರತಿದಿನ ೩ ರಿಂದ ೪ ಲಕ್ಷ ಕೋರಿಕೆಗಳು ಬರುತ್ತಿವೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.