ಆಂಡ್ರಾಯ್ಡ್ ಬಳಕೆದಾರರು ಈಗ ಗೂಗಲ್ ಅಸಿಸ್ಟೆಂಟ್ ಮೂಲಕ ಆಡಿಯೋ ಮೆಸೇಜ್ ಕಳಿಸಬಹುದು! 

ಗೂಗಲ್ ತನ್ನ ಗ್ರಾಹಕರಿಗೆ ಹಲವು ಹೊಸ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ಈಗ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆದಾರರು ಗೂಗಲ್ ಅಸಿಸ್ಟೆಂಟ್ ಮೂಲಕ ಆಡಿಯೋ ಮೆಸೇಜ್ ಕಳಿಸಬಹುದಾಗಿದೆ. 

ಗೂಗಲ್ ತನ್ನ ಬ್ಲಾಗ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಗೂಗಲ್ ಅಸಿಸ್ಟೆಂಟ್, ಧ್ವನಿ ಮೂಲಕ ಆರು ರೀತಿಗಳಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಪಡೆಯಬಹುದು ಎಂದು ಹೇಳಿದೆ. 

ಮೈಕ್ ಐಕಾನ್ ನ್ನು ಹೆಚ್ಚು ಸಮಯ ಹಿಡಿಯದೇ ಆಡಿಯೋ ಮೆಸೇಜ್ ಕಳಿಸಬಹುದಾಗಿದೆ. ಈ ರೀತಿ ಆಡಿಯೋ ಮೆಸೇಜ್ ಕಳಿಸುವುದಕ್ಕೆ ಹೇ ಗೂಗಲ್ ಎಂದು ಹೇಳಿದರೆ ಆಡಿಯೋ ಮೆಸೇಜ್ ಕಳಿಸಬಹುದಾಗಿದೆ. 

ಆಂಗ್ಲ ಭಾಷೆ ಮಾತನಾಡುವ ರಾಷ್ಟ್ರಗಳಲ್ಲಿ ಹಾಗೂ ಪೋರ್ಚುಗೀಸ್, ಬ್ರೆಜಿಲ್ ನಲ್ಲಿ ಈ ಸೌಲಭ್ಯ ಲಭ್ಯವಿದೆ. ವೆಬ್ ಆರ್ಟಿಕಲ್ ಓದುವುದಕ್ಕೆ ಸಹಕಾರಿ: ಗೂಗಲ್ ಅಸಿಸ್ಟೆಂಟ್ ನ ವೆಬ್ ಲೇಖನಗಳನ್ನು ಓದುವುದಕ್ಕೂ ಸಹ ಉಪಯೋಗಿಸಿಕೊಳ್ಳಬಹುದಾಗಿದೆ. 

ಆಂಡ್ರಾಯ್ಡ್ ಫೋನ್ ನಲ್ಲಿ ವೆಬ್ ಆರ್ಟಿಕಲ್ ಕಂಡೊಡನೆಯೇ ಗೂಗಲ್ ಗೆ ಓದುವುದಕ್ಕೆ ಧ್ವನಿ ಸಂದೇಶದ ಮೂಲಕ ನಿರ್ದೇಶನ ನೀಡಿದರೆ ಲೇಖನ ಓದಲು ಪ್ರಾರಂಭಿಸುತ್ತದೆ. ಸೆಲ್ಫಿ ಸ್ನ್ಯಾಪ್: ಸೆಲ್ಫಿ ತೆಗೆಯುವುದಕ್ಕೂ ಸಹ ಗೂಗಲ್ ಅಸಿಸ್ಟೆಂಟ್ ನ್ನು ಬಳಕೆ ಮಾಡಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com