ಲಾವಾ Z53 ಸ್ಮಾರ್ಟ್ ಫೋನ್ ಬಿಡುಗಡೆ, ಬೆಲೆ ಅತ್ಯಂತ ಕಡಿಮೆ: ಜಿಯೋ ಗ್ರಾಹಕರಿಗೆ ವಿಶೇಷ ಆಫರ್

ಸ್ಮಾರ್ಟ್ ಫೋನ್ ಉತ್ಪಾದಕ ದೇಶಿಯ ಸಂಸ್ಥೆ ಲಾವ ಫೆ.06 ರಂದು ಅಗ್ಗದ ದರದಲ್ಲಿ ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಿದೆ. 

Published: 06th February 2020 06:51 PM  |   Last Updated: 22nd February 2020 02:20 PM   |  A+A-


Lava launches in India for Rs 4,829

ಲಾವಾ Z53 ಸ್ಮಾರ್ಟ್ ಫೋನ್ ಬಿಡುಗಡೆ, ಬೆಲೆ ಅತ್ಯಂತ ಕಡಿಮೆ: ಜಿಯೋ ಗ್ರಾಹಕರಿಗೆ ವಿಶೇಷ ಆಫರ್

Posted By : Srinivas Rao BV
Source : IANS

ಸ್ಮಾರ್ಟ್ ಫೋನ್ ಉತ್ಪಾದಕ ದೇಶಿಯ ಸಂಸ್ಥೆ ಲಾವಾ ಫೆ.06 ರಂದು ಅಗ್ಗದ ದರದಲ್ಲಿ ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಿದೆ. 

'ಲಾವಾ Z53' ಬಿಡುಗಡೆ ಮಾಡಿರುವ ಹೊಸ ಸ್ಮಾರ್ಟ್ ಫೋನ್ ಆಗಿದ್ದು,  4,829 ರೂಪಾಯಿಗಳಲ್ಲಿ ಲಭ್ಯವಿದೆ. ಸ್ಮಾರ್ಟ್ ಫೋನ್ ನಲ್ಲಿ ಎಂಟ್ರಿ-ಲೆವೆಲ್ ಹ್ಯಾಂಡ್ ಸೆಟ್ ಇದಾಗಿದ್ದು, ಆಂಡ್ರಾಯ್ಡ್ 9 Pie (Go Edition) ಕಾರ್ಯನಿರ್ವಹಣಾ ವ್ಯವಸ್ಥೆ (ಒ.ಎಸ್) ಯನ್ನು ಹೊಂದಿದೆ. ಕ್ವಾಡ್-ಕೋರ್ ಪ್ರೊಸೆಸರ್, 6.1 ಇಂಚಿನ ಪರದೆ. 8 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮರಾ, 1 ಜಿಬಿ ಆರ್.ಎ.ಎಂ 16 ಜಿಬಿ ವರೆಗಿನ ಆಂತರಿಕ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.

ರಿಲಾಯನ್ಸ್ ಜಿಯೋ ಬಳಕೆದಾರರಿಗೆ ವಿಶೇಷ ಆಫರ್ ನೀಡಲಾಗಿದ್ದು, ಜಿಯೋ ಬಳಕೆದಾರರು ಈ ಹ್ಯಾಂಡ್ ಸೆಟ್ ನ್ನು ಖರೀದಿಸಿದರೆ 1,200 ರೂಪಾಯಿ ಕ್ಯಾಷ್ ಬ್ಯಾಕ್ ಹಾಗೂ 50 ಜಿಬಿ ಡೇಟಾ ಹೆಚ್ಚುವರಿಯಾಗಿ ಲಭ್ಯವಾಗಲಿದೆ. ಪ್ರಿಸ್ಮ್ ಬ್ಲೂ ಮತ್ತು ಪ್ರಿಸ್ಮ್ ಗುಲಾಬಿ ಬಣ್ಣದಲ್ಲಿ Z53 ಲಭ್ಯವಿದೆ.

Stay up to date on all the latest ಗ್ಯಾಡ್ಜೆಟ್ಸ್ news with The Kannadaprabha App. Download now
facebook twitter whatsapp