ಲಾವಾ ರಿಪಬ್ಲಿಕ್ ಡೇ ಲಿಮಿಟೆಡ್ ಎಡಿಶನ್ 'ಎ5' ಫೋನ್ ಬಿಡುಗಡೆ

ಗಣರಾಜ್ಯೋತ್ಸವ ದಿನಕ್ಕೆ ಮುನ್ನ ಲಾವಾ, ತನ್ನ ಲಾವಾ ಎ5 ರಿಪಬ್ಲಿಕ್ ಡೇ ಲಿಮಿಟೆಡ್ ಎಡಿಶನ್ ವೈಶಿಷ್ಟ್ಯದ ಫೋನ್ ಬಿಡುಗಡೆ ಮಾಡಿದೆ.

Published: 11th January 2020 05:07 PM  |   Last Updated: 11th January 2020 05:07 PM   |  A+A-


LAVA A5

ಲಾವಾ ಎ5

Posted By : Prasad SN
Source : The New Indian Express

ಗಣರಾಜ್ಯೋತ್ಸವ ದಿನಕ್ಕೆ ಮುನ್ನ ಲಾವಾ, ತನ್ನ ಲಾವಾ ಎ5 ರಿಪಬ್ಲಿಕ್ ಡೇ ಲಿಮಿಟೆಡ್ ಎಡಿಶನ್ ವೈಶಿಷ್ಟ್ಯದ ಫೋನ್ ಅನ್ನು ರೂ. 1,449 ಕ್ಕೆ ಬಿಡುಗಡೆ ಮಾಡಿದೆ.

ಸಾಧನವು 2.4-ಇಂಚಿನ ಡಿಸ್ಪ್ಲೇ, ಡ್ಯುಯಲ್ ಸಿಮ್ ಸಪೋರ್ಟ್ ಹೊಂದಿದೆ ಮತ್ತು ಸೂಪರ್ ಬ್ಯಾಟರಿ ಮೋಡ್‌ನೊಂದಿಗೆ ಬೆಂಬಲಿತವಾದ 1,000 mAh ಲಿ-ಐಯಾನ್ ಬ್ಯಾಟರಿ ಹೊಂದಿದೆ. ಇದು ಒಂದೇ ಚಾರ್ಜ್‌ನೊಂದಿಗೆ 3 ದಿನಗಳವರೆಗೆ ಕೆಲಸ ಮಾಡುತ್ತದೆ. 22 ಭಾಷೆಗಳಲ್ಲಿ ಒಳಬರುವ ಸಂದೇಶಗಳನ್ನು ಸಹ ಇದು ಬೆಂಬಲಿಸುತ್ತದೆ. ಬಳಕೆದಾರರು ಈ ಫೋನ್ ನಲ್ಲಿ ಇಂಗ್ಲಿಷ್, ಹಿಂದಿ, ತಮಿಳು, ಕನ್ನಡ, ತೆಲುಗು, ಗುಜರಾತಿ ಮತ್ತು ಪಂಜಾಬಿ ಸೇರಿದಂತೆ 7 ಭಾಷೆಗಳಲ್ಲಿ ಟೈಪ್ ಮಾಡಬಹುದು.

ಫೋನ್ ಜೂಮ್ ಮತ್ತು ವಿಡಿಯೋ ರೆಕಾರ್ಡಿಂಗ್ ವೈಶಿಷ್ಟ್ಯದೊಂದಿಗೆ 0.3 ಎಂಪಿ ಪ್ರಾಥಮಿಕ ಕ್ಯಾಮೆರಾವನ್ನು ನೀಡುತ್ತದೆ. ಇದು ಪ್ರಸ್ತುತ ಆಫ್‌ಲೈನ್‌ನಲ್ಲಿ ಮಾತ್ರ ಲಭ್ಯವಿದ್ದರೂ, ಗ್ರಾಹಕರು ಇದನ್ನು ಜನವರಿ 16 ರಿಂದ ಆನ್‌ಲೈನ್‌ನಲ್ಲಿ ಖರೀದಿಸಬಹುದಾಗಿದೆ.

ಫೋನ್ ತ್ವರಿತ ಟಾರ್ಚ್, ರೆಕಾರ್ಡಿಂಗ್ ನೊಂದಿಗೆ ವೈರ್ಲೆಸ್ ಎಫ್ಎಂ, ಯುಎಸ್‏ಬಿ ಕನೆಕ್ಟಿವಿಟಿ ಮತ್ತು ಬ್ಲೂಟೂತ್ ಅನ್ನು ಸಹ ಒಳಗೊಂಡಿದೆ.

Stay up to date on all the latest ಗ್ಯಾಡ್ಜೆಟ್ಸ್ news with The Kannadaprabha App. Download now
facebook twitter whatsapp