ರಿಯಲ್‌ಮಿ ಸ್ಮಾರ್ಟ್ ವಾಚ್, ಟಿವಿಗಳು ಭಾರತದ ಮಾರುಕಟ್ಟೆಗೆ ಲಗ್ಗೆ

ಸ್ಮಾರ್ಟ್‌ಫೋನ್ ಬ್ರ್ಯಾಂಡ್ ರಿಯಲ್‌ಮಿ ಸೋಮವಾರ ಟೆಕ್-ಲೈಫ್‌ಸ್ಟೈಲ್ ವಿಭಾಗಕ್ಕೆ ಪ್ರವೇಶಿಸಿದೆ. ಸ್ಮಾರ್ಟ್ ಟಿವಿ ಟು ಸ್ಮಾರ್ಟ್ ವಾಚ್‌ನ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.
ರಿಯಲ್‌ಮಿ ಸ್ಮಾರ್ಟ್ ವಾಚ್, ಟಿವಿ
ರಿಯಲ್‌ಮಿ ಸ್ಮಾರ್ಟ್ ವಾಚ್, ಟಿವಿ

ಚೆನ್ನೈ: ಸ್ಮಾರ್ಟ್‌ಫೋನ್ ಬ್ರ್ಯಾಂಡ್ ರಿಯಲ್‌ಮಿ ಸೋಮವಾರ ಟೆಕ್-ಲೈಫ್‌ಸ್ಟೈಲ್ ವಿಭಾಗಕ್ಕೆ ಪ್ರವೇಶಿಸಿದೆ. ಸ್ಮಾರ್ಟ್ ಟಿವಿ ಟು ಸ್ಮಾರ್ಟ್ ವಾಚ್‌ನ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಈ ಕ್ರಮದಿಂದ, ರಿಯಲ್‌ಮಿ ಭಾರತದಲ್ಲಿ ಶಿಯೋಮಿಯಂತಹ ಪ್ರತಿಸ್ಪರ್ಧಿಗಳನ್ನು ಎದುರಿಸುವ ಗುರಿ ಹೊಂದಿದೆ.

ರಿಯಲ್‌ಮಿ ಬಡ್ಸ್ ಏರ್ ನಿಯೋ ಮತ್ತು ರಿಯಲ್‌ಮಿ 10000 ಎಮ್‌ಎಹೆಚ್‌ ಪವರ್ ಬ್ಯಾಂಕ್ 2 ಜೊತೆಗೆ, ತನ್ನ ಬಹುನಿರೀಕ್ಷಿತ ರಿಯಲ್‌ಮಿ ಸ್ಮಾರ್ಟ್ ಟಿವಿ ಮತ್ತು ರಿಯಲ್‌ಮಿ ವಾಚ್‌ನಂತಹ ಎಐಒಟಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಮತ್ತು ಅತ್ಯಂತ ಜನಪ್ರಿಯ ಟೆಕ್-ಟ್ರೆಂಡ್‌ಸೆಟರ್ ಬ್ರಾಂಡ್ ಆಗುವ ಹಾದಿಯಲ್ಲಿದೆ ಎಂದು ರಿಯಲ್‌ಮಿ ಹೇಳಿಕೊಂಡಿದೆ.

ರಿಯಲ್‌ಮಿ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಧವ್ ಶೆತ್, “ಭಾರತ ಯಾವಾಗಲೂ ರಿಯಲ್‌ಮಿ ಹೆಚ್ಚಿನ ಆದ್ಯತೆಯ ಮಾರುಕಟ್ಟೆಯಾಗಿದೆ. 2020 ರಲ್ಲಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಅನೇಕ ಎಐಒಟಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ನಾವು ಗುರಿ ಹೊಂದಿದ್ದೇವೆ. ಈ ಯೋಜನೆಯ ಭಾಗವಾಗಿ, ಉದ್ಯಮದ ಪ್ರಮುಖ ಮೀಡಿಯಾ ಟೆಕ್ ಚಿಪ್‌ಸೆಟ್‌ಗಳು ಮತ್ತು ಡಾಲ್ಬಿ ಆಡಿಯೊ ಕ್ವಾಡ್ ಸ್ಪೀಕರ್‌ಗಳಿಂದ ಶಕ್ತವಾಗಿರುವ ನಮ್ಮ ಮೊದಲ ಸ್ಮಾರ್ಟ್ ಟಿವಿಯನ್ನು ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ. ಅವು ಉತ್ತಮ ಗುಣಮಟ್ಟದ ಧ್ವನಿ ಮತ್ತು ಚಿತ್ರವನ್ನು ನೀಡುತ್ತವೆ. ಅಲ್ಲದೆ, ನಾವು ಹೆಚ್ಚು ಕ್ರಿಯಾತ್ಮಕ 'ರಿಯಲ್‌ಮಿ ವಾಚ್‌' ಸ್ಮಾರ್ಟ್ ವಾಚ್ ಅನ್ನು ಸಹ ಪರಿಚಯಿಸಿದ್ದೇವೆ” ಎಂದು ತಿಳಿಸಿದರು.

ರಿಯಲ್‌ಮಿ ವಾಚ್‌ಗೆ 3,999 ರೂ. ಗಳ ಬೆಲೆ ನಿಗದಿಪಡಿಸಲಾಗಿದ್ದು, ಜೂನ್ 5 ರಿಂದ ಮಧ್ಯಾಹ್ನ 12 ಗಂಟೆಗೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟವಾಗಲಿದೆ. ಹೆಚ್ಚುವರಿ ಸ್ಟ್ರಾಪ್ ಬಣ್ಣಗಳಾದ ರೆಡ್, ಬ್ಲೂ ಮತ್ತು ಗ್ರೀನ್ ಅನ್ನು ಶೀಘ್ರದಲ್ಲೇ ಪರಿಚಯಿಸುವುದಾಗಿ ಕಂಪನಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com