ಎನ್-95 ಮಾಸ್ಕ್ ಗೆ ಬಿಲ್ಟ್ ಇನ್ ಮೈಕ್ರೋಫೋನ್: ಮಾಸ್ಕ್ ಫೋನ್ ಧರಿಸಿ ಕರೆ ಸ್ವೀಕರಿಸಬಹುದು!

ಕೊರೋನಾ ಕಾಲದಲ್ಲಿ ಮಾಸ್ಕ್ ಧರಿಸಿ ಮಾತನಾಡುವುದು, ಅದರಲ್ಲಿಯೂ ಕರೆ ಬಂದಾಗ ಸ್ವೀಕರಿಸುವುದು ಕಿರಿಕಿರಿಯ ಕೆಲಸವಾಗಿತ್ತು ಆದರೆ ಇದಕ್ಕೆ ಪರಿಹಾರ ದೊರೆತಿದೆ. 
ಎನ್-95 ಮಾಸ್ಕ್ ಗೆ ಬಿಲ್ಟ್ ಇನ್ ಮೈಕ್ರೋಫೋನ್: ಮಾಸ್ಕ್ ಫೋನ್ ಧರಿಸಿ ಕರೆ ಸ್ವೀಕರಿಸಬಹು
ಎನ್-95 ಮಾಸ್ಕ್ ಗೆ ಬಿಲ್ಟ್ ಇನ್ ಮೈಕ್ರೋಫೋನ್: ಮಾಸ್ಕ್ ಫೋನ್ ಧರಿಸಿ ಕರೆ ಸ್ವೀಕರಿಸಬಹು

ಕೊರೋನಾ ಕಾಲದಲ್ಲಿ ಮಾಸ್ಕ್ ಧರಿಸಿ ಮಾತನಾಡುವುದು, ಅದರಲ್ಲಿಯೂ ಕರೆ ಬಂದಾಗ ಸ್ವೀಕರಿಸುವುದು ಕಿರಿಕಿರಿಯ ಕೆಲಸವಾಗಿತ್ತು ಆದರೆ ಇದಕ್ಕೆ ಪರಿಹಾರ ದೊರೆತಿದೆ. 

ಪ್ರತಿಯೊಬ್ಬರೂ ತಮ್ಮ ದೈನಂದಿನ ಚಟುವಟಿಕೆಗಳನ್ನು ಮಾಸ್ಕ್ ಧರಿಸಿಯೇ ಮಾಡುವಂತೆ ಮಾಡಿದೆ ಕೊರೋನಾ ಆದರೆ ಪ್ರತಿ ಬಾರಿಯೂ ಕರೆ ಬಂದಾಗ ಮಾಸ್ಕ್ ತೆಗೆದು ಮಾಡುವ ಅನಿವಾರ್ಯತೆ ಎದುರಾಗುತ್ತಿತ್ತು.

ಟೆಕ್ ಸಂಸ್ಥೆಗಳು ಇದಕ್ಕೆ ವಿನೂತನ ಪರಿಹಾರ ಕಂಡುಕೊಂಡಿದ್ದು ಮಾಸ್ಕ್ ಗಳಿಗೆ ಹೆಡ್ ಫೋನ್ ಹಾಗೂ ಮೈಕ್ರೋಫೋನ್ ನ್ನು ಅಳವಡಿಸುವ ಕೆಲಸ ಮಾಡಿವೆ.

ಎನ್-95 ಮಾಸ್ಕ್ ಗೆ ಮೈಕ್ರೋಫೋನ್, ಇಯರ್ ಫೋನ್ ನ್ನು ಅಳವಡಿಸಲಾಗಿದ್ದು, ಮಾಸ್ಕ್ ಧರಿಸಿಯೇ ಫೋನ್ ಕರೆಗಳನ್ನು ಹಾಗೂ ಸಂಗೀತವನ್ನು ಕೇಳಬಹುದಾಗಿದೆ.

ಈ ವಿನೂತನ ಮಾಸ್ಕ್ ಗಳಿಗೆ ಮಾಸ್ಕ್ ಫೋನ್ ಎಂದು ನಾಮಕರಣ ಮಾಡಲಾಗಿದ್ದು, ಹ್ಯುಬಲ್ ಕನೆಕ್ಟ್ ಆಪ್ ಮೂಲಕವಾಗಿ ಬಳಕೆದಾರರು ಯಾವುದೇ ವ್ಯಕ್ತಿಯ ಜೊತೆ ಮಾತನಾಡುವಾಗ ತಮ್ಮ ಧ್ವನಿಯನ್ನು ಪ್ರೊಜೆಕ್ಟ್ ಮಾಡುವ ಸೌಲಭ್ಯವನ್ನೂ ಹ್ಯೂಬಲ್ ಕನೆಕ್ಟ್ ಕಂಪನಿಯಿಂದ ಒದಗಿಸಲಾಗಿದೆ.

ಒಮ್ಮೆ ಚಾರ್ಜ್ ಮಾಡಿದರೆ 12 ಗಂಟೆಗಳ ಕಾಲ ಮಾಸ್ಕ್ ಫೋನ್ ನ್ನು ಬಳಕೆ ಮಾಡಬಹುದಾಗಿದೆ. ವಾಲ್ಯೂಮ್ ನ್ನು ನಿಯಂತ್ರಿಸಬಹುದಾಗಿದೆ. ಈ ಮಾಸ್ಕ್ ಫೋನ್ ಗೆ ಗೂಗಲ್ ಅಸಿಸ್ಟೆಂಟ್ ನ್ನು ಸಹ ಬಳಕೆ ಮಾಡಬಹುದಾಗಿರುವುದು ವಿಶೇಷವಾಗಿದೆ. ಒಂದು ಮಾಸ್ಕ್ ಗೆ 3,600 ರೂಪಾಯಿಗಳನ್ನು ನಿಗದಿಪಡಿಸಲಾಗಿದ್ದು, ಭಾರತದ ಮಾರುಕಟ್ಟೆಗೆ ಇನ್ನಷ್ಟೇ ಬರಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com