ಮುಂಬೈ: ಐಫೋನ್ ಪ್ರಿಯರಿಗೆ ಆ್ಯಪಲ್ ಸಂಸ್ಥೆ ಸಿಹಿ ಸುದ್ದಿ ನೀಡಿದ್ದು, ಮುಂದಿನ ತಿಂಗಳೇ iPhone 16 ಫೋನ್ ಗಳನ್ನು ಬಿಡುಗಡೆ ಮಾಡಲಿದೆ.
ಮೂಲಗಳ ಪ್ರಕಾರ ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ 9 ರಂದು ಐಫೋನ್ 16 ಬಿಡುಗಡೆಯಾಗಲಿದೆ. ಆಪಲ್ ಈ ಕುರಿತು ನಿಖರ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದು, ಕೇವಲ ಮೂರು ವಾರಗಳಲ್ಲಿ ಇದು ಜನರ ಕೈ ಸೇರಲಿದೆ.
"ಇಟ್ಸ್ ಗ್ಲೋಟೈಮ್"
"ಇಟ್ಸ್ ಗ್ಲೋಟೈಮ್" ಎಂಬ ಘೋಷಣೆಯನ್ನು ಆ್ಯಪಲ್ ಮಾಡಿದ್ದು, ಈ ವಿಶೇಷ ಕಾರ್ಯಕ್ರಮಕ್ಕೆ ಮಾಧ್ಯಮವನ್ನು ಆಹ್ವಾನಿಸುವ ಮೂಲಕ ಆಪಲ್ ಅಧಿಕೃತವಾಗಿ ಐಫೋನ್ 16 ಬಿಡುಗಡೆಯನ್ನು ಘೋಷಿಸಿದೆ. ಈವೆಂಟ್ ಅನ್ನು ಆಪಲ್ ಪಾರ್ಕ್‌ನಿಂದ ಬೆಳಿಗ್ಗೆ 10 ಗಂಟೆಗೆ ಪ್ರಸಾರ ಮಾಡಲಾಗುತ್ತದೆ. ಅಂದರೆ ಈ ಈವೆಂಟ್ ಸೆಪ್ಟೆಂಬರ್ 9, 2024 ರಂದು ರಾತ್ರಿ 10:30 PM IST ಕ್ಕೆ ಲೈವ್ ಆಗಲಿದೆ. ಈವೆಂಟ್ ಅನ್ನು ಯೂಟ್ಯೂಬ್ ಮತ್ತು ಆಪಲ್ ಈವೆಂಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.
ಐಫೋನ್ ಮಾತ್ರವಲ್ಲದೇ, ಏರ್‌ಪಾಡ್‌ಗಳು, ವಾಚ್‌ಗಳು ಎಲ್ಲವೂ ಲಭ್ಯವಿದೆ. ಈ ಸೆಪ್ಟೆಂಬರ್ ಈವೆಂಟ್‌ನಲ್ಲಿ ಇದೆಲ್ಲವೂ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಆದರೆ ಹೊಸ ಮ್ಯಾಕ್‌ಬುಕ್ಅನ್ನು ಒಂದು ತಿಂಗಳ ನಂತರ ಅಕ್ಟೋಬರ್‌ನಲ್ಲಿ ವಿಶೇಷ ಕಾರ್ಯಕ್ರಮವನ್ನು ಮಾಡಿ ನಂತರ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಆ್ಯಪಲ್ ಮೂಲಗಳು ತಿಳಿಸಿವೆ.
ಮಾರಾಟ ಯಾವಾಗ?
ಐಫೋನ್ 16 ಅನ್ನು ಸೆಪ್ಟೆಂಬರ್ 9 ರಂದು ಬಿಡುಗಡೆ ಮಾಡಲಾಗಿದ್ದರೂ, ಮಾರಾಟವು ಸೆಪ್ಟೆಂಬರ್ 20 ರಿಂದ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ಕಂಪನಿ ಇನ್ನೂ ಅಧಿಕೃತ ಘೋಷಣೆ ಮಾಡಬೇಕಿದೆ. ಐಫೋನ್ 16 ಸರಣಿಯ ಬೆಲೆ ಹೆಚ್ಚಾಗದಿರಬಹುದು ಎಂದು ವರದಿಯಾಗಿದೆ. ಇದಲ್ಲದೆ, ಭಾರತದಲ್ಲಿ ಬೆಲೆಗಳು ಕಡಿಮೆಯಾಗಬಹುದು ಎಂಬ ಊಹಾಪೋಹಗಳಿವೆ.
iPhone 16 ನ ವೈಶಿಷ್ಟ್ಯ
ಐಫೋನ್ 16 ನ ವೈಶಿಷ್ಟ್ಯಗಳ ಬಗ್ಗೆ ಕೆಲವು ಸಮಯದಿಂದ ವದಂತಿಗಳು ಕೇಳಿಬರುತ್ತಿವೆ. ಐಫೋನ್ 16 48 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾ, 12 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು ವೀಡಿಯೊ ಬೆಂಬಲವನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ. ಉತ್ತಮ ಕಾರ್ಯಕ್ಷಮತೆ ಮತ್ತು AI ವೈಶಿಷ್ಟ್ಯಗಳಿಗಾಗಿ, iPhone 16 ಹೊಸ A18 Pro ಚಿಪ್‌ಸೆಟ್‌ನೊಂದಿಗೆ ಬರುವ ನಿರೀಕ್ಷೆಯಿದೆ.
Advertisement