
ನವದೆಹಲಿ: ಸ್ಯಾಮ್ ಸಂಗ್, ಮೊಟೊರೋಲಾ, ಸೋನಿ, ಆಪಲ್ ಗಳ 35 ಮೊಬೈಲ್ ಫೋನ್ ಗಳಲ್ಲಿ ವಾಟ್ಸ್ ಆಪ್ (WhatsApp) ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದೆ. ಈ ಮೊಬೈಲ್ ಗಳು ಇನ್ನು ಮುಂದೆ ವಾಟ್ಸ್ ಆಪ್ ಅಪ್ಡೇಟ್ ಗಳು ಭದ್ರತೆಗಳನ್ನು ಸ್ವೀಕರಿಸುವುದಿಲ್ಲ.
ಮೆಟಾ ಒಡೆತನದ ವೇದಿಕೆ ವಾಟ್ಸ್ ಆಪ್ ನ ಕನಿಷ್ಟ ವ್ಯವಸ್ಥೆಯ ಅವಶ್ಯಕತೆಗಳನ್ನು ಬದಲಾವಣೆ ಮಾಡಿದ್ದು, ಹಳೆಯ ಫೋನ್ ಬಳಕೆದಾರರ ಮೇಲೆ ಪರಿಣಾಮ ಉಂಟುಮಾಡಲಿದೆ.
ಸ್ಯಾಮ್ ಸಂಗ್: ಗ್ಯಾಲೆಕ್ಸಿ ನೋಟ್ 3, ಗ್ಯಾಲೆಕ್ಸಿ ಎಸ್ 3, ಮಿನಿ, ಗ್ಯಾಲೆಕ್ಸಿ ಎಸ್4 ಮಿನಿ, ಗ್ಯಾಲೆಕ್ಸಿ ಏಸ್ ಪ್ಲಸ್, ಗ್ಯಾಲೆಕ್ಸಿ ಕೋರ್, ಗ್ಯಾಲೆಕ್ಸಿ ಎಕ್ಸ್ ಪ್ರೆಸ್ 2, ಗ್ಯಾಲೆಕ್ಸಿ ಗ್ರ್ಯಾಂಡ್, ಗ್ಯಾಲೆಕ್ಸಿ ನೋಟ್ 3, ಗ್ಯಾಲೆಕ್ಸಿ ಎಸ್4 ಝೂಮ್.
ಆಪಲ್: ಐಫೋನ್ 5, ಐಫೋನ್ 6, ಐಫೋನ್ ಎಸ್ಇ, ಐಫೋನ್ 6ಎಸ್, ಐಫೋನ್ 6ಎಸ್ ಪ್ಲಸ್
ಮೋಟೊರೋಲಾ: ಮೋಟೋ G, ಮೋಟೋ ಎಕ್ಸ್
ಹುವಾವೇ : ಆಸ್ಕೆಂಡ್ ಪಿ6ಎಸ್, ಆಸ್ಕೆಂಡ್ G525, ಹುವಾವೇ C199, ಹುವಾವೇ GX1s, ಹುವಾವೇ Y625
ಲೆನೊವೊ: ಲೆನೊವೊ 46600, ಲೆನೊವೊ A858T, ಲೆನೊವೊ P70, ಲೆನೊವೊ S890
ಸೋನಿ: Xperia Z1 ಮತ್ತು Xperia E3
ಎಲ್ ಜಿ: ಆಪ್ಟಿಮಸ್4X HD, ಆಪ್ಟಿಮಸ್ G, ಆಪ್ಟಿಮಸ್ G ಪ್ರೋ, ಆಪ್ಟಿಮಸ್ L7
ನೀತಿಯ ಬದಲಾವಣೆಯು ಭಾರತದಲ್ಲಿನ ಬಳಕೆದಾರರಿಗೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ. ವಿಶೇಷವಾಗಿ Huawei ಮತ್ತು LG ಯಂತಹ ಬ್ರಾಂಡ್‌ಗಳ ಫೋನ್‌ಗಳನ್ನು ಹೊಂದಿರುವವರಿಗೆ ಹೆಚ್ಚಿನ ಪರಿಣಾಮ ಉಂಟಾಗಲಿದೆ. ಏಕೆಂದರೆ ಈ ಬ್ರಾಂಡ್ ನ ಸಂಸ್ಥೆಗಳು ಇನ್ನು ಮುಂದೆ ದೇಶದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ. ಮಾರಾಟವನ್ನು ಸ್ಥಗಿತಗೊಳಿಸಿದ ಹೊರತಾಗಿಯೂ, ಅನೇಕರು ಇನ್ನೂ ಈ ಫೋನ್‌ಗಳನ್ನು ಬಳಸುತ್ತಾರೆ ಆದರೆ WhatsApp ಬಳಸುವುದನ್ನು ಮುಂದುವರಿಸಲು ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ.
ಸ್ಮಾರ್ಟ್‌ಫೋನ್ ತಯಾರಕರು ಸಾಮಾನ್ಯವಾಗಿ ಕೆಲವೇ ವರ್ಷಗಳವರೆಗೆ ಸಾಧನಗಳನ್ನು ಬೆಂಬಲಿಸುತ್ತಾರೆ. ಆದ್ದರಿಂದ WhatsApp ನಂತಹ ಅಪ್ಲಿಕೇಶನ್‌ಗಳು ಹೊಸ ಸಾಫ್ಟ್‌ವೇರ್ ಆವೃತ್ತಿಗಳಿಗೆ ಆಪ್ಟಿಮೈಸ್ (optimise) ಮಾಡುತ್ತವೆ. ಇತ್ತೀಚಿನ ಭದ್ರತಾ ವೈಶಿಷ್ಟ್ಯಗಳು ಮತ್ತು ಕಾರ್ಯಚಟುವಟಿಕೆಗಳಿಂದ ಬಳಕೆದಾರರು ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಅಪ್ಲಿಕೇಶನ್ ಈ ಹೊಸ ಅವಶ್ಯಕತೆಗಳನ್ನು ಹೊಂದಿಸಿದೆ.
ಅಪ್ಲಿಕೇಶನ್ Android 5.0 ಅಥವಾ ನಂತರದ ಸಾಧನಗಳನ್ನು ಮತ್ತು iOS 12 ಅಥವಾ ನಂತರದ ಐಫೋನ್‌ಗಳನ್ನು ಮಾತ್ರ Whatsapp ಸಾಫ್ಟ್ ವೇರ್ ಬೆಂಬಲಿಸುತ್ತದೆ.
Advertisement